ಬಂಕಾ: 'ದೆಹಲಿಯಲ್ಲಿ ಮತ ಹಾಕಿದ್ದ ಬಿಜೆಪಿ ನಾಯಕರು ಬಿಹಾರ ವಿಧಾನಸಭೆ ಚುನಾವಣೆಯಲ್ಲೂ ಮತ ಚಲಾಯಿಸಿದ್ದಾರೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಶುಕ್ರವಾರ) ಆರೋಪಿಸಿದ್ದಾರೆ.

'ಬಿಹಾರದಲ್ಲಿ ಗುರುವಾರ ನಡೆದ ಮೊದಲ ಹಂತದ ಮತದಾನದಲ್ಲಿ ದೆಹಲಿಯಲ್ಲಿ ಮತ ಮಾಡಿದ್ದ ಬಿಜೆಪಿ ನಾಯಕರು ಮತ ಚಲಾವಣೆ ಮಾಡಿರುವ ಬಗ್ಗೆ ನನಗೆ ಗೊತ್ತಾಗಿದೆ' ಎಂದು ರಾಹುಲ್ ಹೇಳಿದ್ದಾರೆ.

ಬಂಕಾದಲ್ಲಿ ನಡೆದ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್, 'ಕಳೆದ ವರ್ಷ ನಡೆದಿದ್ದ ಹರಿಯಾಣ ಚುನಾವಣೆಯಲ್ಲಿ ಮತ ಕಳ್ಳತನಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಒದಗಿಸಲಾಗಿದೆ. ಚುನಾವಣಾ ಆಯೋಗವು ಆರೋಪಗಳನ್ನು ನಿರಾಕರಿಸಲು ಸಾಧ್ಯವಿಲ್ಲ' ಎಂದಿದ್ದಾರೆ.

'ಹರಿಯಾಣದಲ್ಲಿ 25 ಲಕ್ಷಕ್ಕೂ ಅಧಿಕ ನಕಲಿ ಮತದಾರರು ಸೇರ್ಪಡೆ ಆಗಿರುವುದು ಗೊತ್ತಾಗಿದೆ. ಚುನಾವಣಾ ಆಯೋಗದೊಂದಿಗೆ ಸೇರಿಕೊಂಡು ಬಿಜೆಪಿ ಮತಕಳವು ನಡೆಸಿತ್ತು' ಎಂದು ಆರೋಪಿಸಿದ್ದಾರೆ.

'ಮಧ್ಯಪ್ರದೇಶ, ಛತ್ತೀಸಗಢದಲ್ಲೂ ಮತಕಳ್ಳತನ ನಡೆದಿದೆ. ಈಗ ಬಿಹಾರದಲ್ಲೂ ಅದನ್ನೇ ಮಾಡಲು ಹೊರಟಿದ್ದಾರೆ. ಆದರೆ ಬಿಹಾರದ ಜನರು ಮತ ಕಳ್ಳತನ ಮಾಡಲು ಬಿಡುವುದಿಲ್ಲ' ಎಂದು ರಾಹುಲ್ ಹೇಳಿದ್ದಾರೆ.
.ಬಿಹಾರದಲ್ಲೂ ಮತಗಳ್ಳತನ; ಚುನಾವಣಾ ಆಯುಕ್ತರೇ ದೋಷಿಗಳು ಎಂದ ರಾಹುಲ್ ಗಾಂಧಿ.ಬಿಹಾರದಲ್ಲಿ ಬಿಜೆಪಿಯ ಮತ ಕಳ್ಳತನ ತಡೆಯುವುದು ಯುವಜನರ ಜವಾಬ್ದಾರಿ: ರಾಹುಲ್ ಗಾಂಧಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.