ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಕಾಂಗ್ರೆಸ್‌ ಕಾರ್ಯಕರ್ತ; ಪ್ರಮುಖವಾಗಿ ಬಿಂಬಿಸಬೇಡಿ– ಲಕ್ಷ್ಮಣ್‌ ಸಿಂಗ್

Published 31 ಡಿಸೆಂಬರ್ 2023, 11:29 IST
Last Updated 31 ಡಿಸೆಂಬರ್ 2023, 11:29 IST
ಅಕ್ಷರ ಗಾತ್ರ

ಭೋಪಾಲ್‌: ‘ರಾಹುಲ್‌ ಗಾಂಧಿ ಅವರು ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ ಮತ್ತು ಸಂಸದ. ಅವರನ್ನು ಪ್ರಮುಖವಾಗಿ ಬಿಂಬಿಸಬಾರದು’ ಎಂದು ಕಾಂಗ್ರೆಸ್‌ನ ಮಾಜಿ ಸಂಸದ ಲಕ್ಷ್ಮಣ್‌ ಸಿಂಗ್ ಹೇಳಿದ್ದಾರೆ.

ಗುನಾ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಚರ್ಚಿಸುವ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.

‘ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹೇಳಿಕೆ ನೀಡುವಾಗ ಟಿ.ವಿ.ಯಲ್ಲಿ ಅವರ ಮುಖವನ್ನು ತೋರಿಸುವುದು ಕಡಿಮೆ’ ಎಂದು ಸುದ್ದಿಗಾರರ ಹೇಳಿಕೆಗೆ ಪ್ರತಿಕ್ರಯಿಸಿದ ಲಕ್ಷ್ಮಣ್‌ ಅವರು, ‘ರಾಹುಲ್‌ ಅವರು ಪಕ್ಷದ ಅಧ್ಯಕ್ಷರಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತ. ಇದೊಂದನ್ನು ಬಿಟ್ಟು ಅವರು ಬೇರೇನೂ ಅಲ್ಲ’ ಎಂದಿದ್ದಾರೆ.

‘ಹುಟ್ಟಿನಿಂದ ಯಾರೂಬ್ಬರೂ ದೊಡ್ಡ ಮನುಷ್ಯರಾಗುವುದಿಲ್ಲ. ಆದರೆ ಅವರ ಕಾರ್ಯಗಳು ಅವರನ್ನು ದೊಡ್ಡ ಮನುಷ್ಯರನ್ನಾಗಿ ಮಾಡುತ್ತವೆ. ರಾಹುಲ್‌ ಅವರು ದೊಡ್ಡ ನಾಯಕ ಎಂದು ಪರಿಗಣಿಸಬೇಡಿ. ನಾನಂತೂ ಹಾಗೆ ಅಂದುಕೊಂಡಿಲ್ಲ. ಅವರೂ ಉಳಿದ ಸಂಸದರಂತೆಯೇ’ ಎಂದಿದ್ದಾರೆ.

 ಲಕ್ಷ್ಮಣ್‌ ಅವರು ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್ ಅವರ ಕಿರಿಯ ಸಹೋದರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT