ನವದೆಹಲಿ: ರಾಷ್ಟ್ರರಾಜಧಾನಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಆಚರಣೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾಗವಹಿಸಿದ್ದಾರೆ.
ಆ ಮೂಲಕ ರಾಹುಲ್ ಗಾಂಧಿ ಅವರು, ಕೆಂಪುಕೋಟೆಯಲ್ಲಿ ದಶಕದ ಬಳಿಕ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಿದ ವಿರೋಧ ಪಕ್ಷದ ಮೊದಲ ನಾಯಕ ಎನಿಸಿದ್ದಾರೆ.
2014ರಿಂದ 2023ರ ವರೆಗೆ ವಿರೋಧ ಪಕ್ಷದ ನಾಯಕನ ಕೊರತೆ ಕಾಡಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಕಾಂಗ್ರೆಸ್‌ನ ರಾಹುಲ್ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು.
ಅತಿ ದೊಡ್ಡ ರಕ್ಷಣಾ ಕವಚ: ರಾಹುಲ್ ಗಾಂಧಿ
'ಸ್ವಾತಂತ್ರ್ಯ ಎಂಬುವುದು ನಮಗೆ ಕೇವಲ ಒಂದು ಪದವಲ್ಲ. ಇದು ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಡಗಿರುವ ಅತಿ ದೊಡ್ಡ ರಕ್ಷಣಾ ಕವಚವಾಗಿದೆ. ಇದು ಅಭಿವ್ಯಕ್ತಿಯ ಶಕ್ತಿಯಾಗಿದ್ದು, ಸತ್ಯವನ್ನು ಹೇಳುವ ಮತ್ತು ಕನಸುಗಳನ್ನು ಈಡೇರಿಸುವ ಭರವಸೆಯಾಗಿದೆ ಎಂದು ರಾಹುಲ್ ಗಾಂಧಿ ತಮ್ಮ ಸಂದೇಶದಲ್ಲಿ' ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸುಮಾರು 6,000 ಅತಿಥಿಗಳು ಭಾಗವಹಿಸಿದ್ದಾರೆ.
#WATCH | Delhi: Lok Sabha LoP Rahul Gandhi arrives at the Red Fort for India's 78th #IndependenceDay celebrations.
— ANI (@ANI) August 15, 2024
Prime Minister Narendra Modi is set to deliver his 11th Independence Day address, from the ramparts of the Red Fort this morning. pic.twitter.com/GQwUNSzZl5
सभी देशवासियों को स्वतंत्रता दिवस की शुभकामनाएं।
— Rahul Gandhi (@RahulGandhi) August 15, 2024
हमारे लिए स्वतंत्रता सिर्फ एक शब्द नहीं - संवैधानिक और लोकतांत्रिक मूल्यों में पिरोया हुआ हमारा सबसे बड़ा सुरक्षा कवच है।
यह शक्ति है अभिव्यक्ति की, क्षमता है सच बोलने की और उम्मीद है सपनों को पूरा करने की।
जय हिंद। 🇮🇳 pic.twitter.com/foLmlSyJDk
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.