ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲ್ಮಾರ್ಗ್‌ನಲ್ಲಿ ಸ್ಕೀಯಿಂಗ್ ನಡೆಸಿದ ರಾಹುಲ್

Last Updated 15 ಫೆಬ್ರುವರಿ 2023, 16:05 IST
ಅಕ್ಷರ ಗಾತ್ರ

ಗುಲ್ಮಾರ್ಗ್‌: ಉತ್ತರ ಕಾಶ್ಮೀರಕ್ಕೆ ಎರಡು ದಿನಗಳ ವೈಯಕ್ತಿಕ ಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಇಲ್ಲಿನ ಗುಲ್ಮಾರ್ಗ್‌ನಲ್ಲಿ ಸ್ಕೀಯಿಂಗ್ ನಡೆಸಿದರು.

ಎರಡು ವಾರಗಳ ಹಿಂದೆಯಷ್ಟೇ ರಾಹುಲ್, ಶ್ರೀನಗರದಲ್ಲಿ ಭಾರತ ಜೋಡೊ ಯಾತ್ರೆಯ ಸಮಾರೋಪ ನೆರವೇರಿಸಿದ್ದರು. ಗುಲ್ಮಾರ್ಗ್‌ನ ಸ್ಕೀಯಿಂಗ್ ರೆಸಾರ್ಟ್‌ಗೆ ಭೇಟಿ ನೀಡುವ ಮುನ್ನ ಇಲ್ಲಿನ ತಂಗ್‌ಮಾರ್ಗ್ ಪಟ್ಟಣದಲ್ಲಿ ಕೆಲಕಾಲ ತಂಗಿದ್ದ ರಾಹುಲ್ ತಮ್ಮ ನೆಚ್ಚಿನ ಟೀ ಶರ್ಟ್ ಧರಿಸಿ ಗಮನ ಸೆಳೆದರು.

ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ರಾಹುಲ್, ‘ನಮಸ್ಕಾರ’ ಎಂದಷ್ಟೇ ಹೇಳಿದರು.

ಗುಲ್ಮಾರ್ಗ್‌ನ ಪ್ರಸಿದ್ಧ ಗೊಂಡೊಲಾ ಕೇಬಲ್ ಕಾರಿನಲ್ಲಿ ಸಂಚರಿಸಿದ ರಾಹುಲ್, ಸ್ಕೀಯಿಂಗ್ ನಡೆಸಲು ಅಫವರ್ತ್‌ ಶಿಖರ ಪ್ರದೇಶದತ್ತ ತೆರಳಿದರು. ಅಲ್ಲಿ ಪ್ರವಾಸಿಗರು ರಾಹುಲ್ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡರು.

‘ರಾಹುಲ್ ಅವರನ್ನು ಭೇಟಿಯಾದ ನಾವು ಅದೃಷ್ಟವಂತರು’ ಎಂದು ಪ್ರವಾಸಿಗರೊಬ್ಬರು ಪ್ರತಿಕ್ರಿಯಿಸಿದ್ದು, ‘ಭಾರತ್ ಜೋಡೊ ಯಾತ್ರೆಯ ಬಳಿಕ ರಾಹುಲ್ ತಮ್ಮ ಬಿಡುವಿನ ಕಾಲದಲ್ಲಿ ಸ್ಕೀಯಿಂಗ್ ನಡೆಸಿದ್ದು ಸಂತಸಕರ’ ಎಂದು ಮತ್ತೊಬ್ಬ ಪ್ರವಾಸಿ ಹೇಳಿದ್ದಾರೆ.

ಈ ನಡುವೆ ರಾಹುಲ್ ತಮ್ಮ ವೈಯಕ್ತಿಕ ಭೇಟಿಗಾಗಿ ಜಮ್ಮು–ಕಾಶ್ಮೀರದಲ್ಲಿದ್ದು, ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದಿರುವ ಕಾಂಗ್ರೆಸ್‌ನ ಮೂಲಗಳು ಕಾರ್ಯಕ್ರಮದ ವಿವರಗಳನ್ನು ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT