ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಕ್ರಮವು ಸರ್ಕಾರದ ಗೂಂಡಾಗಿರಿಯನ್ನು ತೋರಿಸುತ್ತದೆ. ರಾಜ್ಯದಲ್ಲಿ ಅರಾಜಕತೆ ಇದೆ
ಆರಾಧನಾ ಮಿಶ್ರಾ ಮೋನಾ, ಉತ್ತರ ಪ್ರದೇಶದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಿ
ರಾಹುಲ್‌ನನ್ನು ತಡೆಯಲು ಬರುವುದಿಲ್ಲ. ಆತ ವಿರೋಧ ಪಕ್ಷದ ನಾಯಕ. ಸಂತ್ರಸ್ತರನ್ನು ಭೇಟಿ ಮಾಡಲು ಅವನಿಗೆ ಸಾಂವಿಧಾನಿಕ ಹಕ್ಕಿದೆ
ಪ್ರಿಯಾಂಕಾ ಗಾಂಧಿ ವಾದ್ರಾ, ವಯನಾಡ್ ಸಂಸದೆ
ಸಂವಿಧಾನವನ್ನು ಹರಿದು ಚೂರು ಮಾಡಿ, ತಮ್ಮ ವಿಭಜನಕಾರಿ ಕಾರ್ಯಸೂಚಿಯನ್ನು ಊರುವಲ್ಲಿ ಬಿಜೆಪಿ–ಆರ್‌ಎಸ್‌ಎಸ್ ನಿರತವಾಗಿದೆ. ಸಂಭಲ್ ಸಂತ್ರಸ್ತರನ್ನು ಭೇಟಿ ಮಾಡದಂತೆ ವಿರೋಧ ಪಕ್ಷದ ನಾಯಕನನ್ನು ತಡೆದಿರುವುದು ಅವರ ಕಾರ್ಯಸೂಚಿಗೆ ಸಾಕ್ಷ್ಯದಂತಿದೆ
ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಸಂಭಲ್‌ನಲ್ಲಿ ಶಾಂತಿ ನೆಲೆಸಿದ ಬಳಿಕ ಬೇಕಾದರೆ ಅವರು (ವಿರೋಧ ಪಕ್ಷದವರು) ಅಲ್ಲಿಗೆ ಹೋಗಿ ವಲಿಮಾದಲ್ಲಿ (ಮುಸ್ಲಿಮರ ಮದುವೆ ಶಾಸ್ತ್ರ) ಭಾಗಿಯಾಗಲಿ