ನವದೆಹಲಿ: ಜನರಲ್ ಬಿಪಿನ್ ರಾವತ್ ಅವರ ಅಕಾಲಿಕ ಸಾವು, ರಕ್ಷಣಾ ಪಡೆಗಳಿಗೆ ಹಾಗೂ ದೇಶಕ್ಕೆ ಭರಿಸಲಾಗದ ನಷ್ಟ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ
ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡು 13 ಜನರ ಸಾವಿಗೆ ಕಾರಣವಾದ ಘಟನೆ ದುರದೃಷ್ಟಕರ ಎಂದು ಟ್ವೀಟ್ ಮಾಡಿರುವ ಸಚಿವ ಸಿಂಗ್, ‘ರಾವತ್ ಅವರು ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ಅಸಾಧಾರಣ ಧೈರ್ಯ ಹಾಗೂ ಶ್ರದ್ಧೆಯಿಂದ ದೇಶಕ್ಕಾಗಿ ಸೇವೆ ಸಲ್ಲಿಸಿದರು. ಸೇನಾಪಡೆ, ವಾಯುಪಡೆ ಹಾಗೂ ನೌಕಾಪಡೆಗಳನ್ನು ಬೆಸೆಯುವ ಯೋಜನೆಯನ್ನು ಸಿದ್ಧಪಡಿಸಿದ್ದರು’ ಎಂದು ಸ್ಮರಿಸಿದ್ದಾರೆ.ಘಟನೆಯಲ್ಲಿ ತಮ್ಮವರನ್ನು ಕಳೆದುಕೊಂಡವರ ಕುಟುಂಬದವರಿಗೆ ಸಾಂತ್ವನಹೇಳಿದ್ದಾರೆ.

ಇದಕ್ಕೂ ಮುನ್ನ ಸೇನಾ ಹೆಲಿಕಾಪ್ಟರ್ ಪತನ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರ ನೀಡಿದ ರಕ್ಷಣಾ ಸಚಿವರು, ವಾಯುಪಡೆಯ ಮುಖ್ಯಸ್ಥರಿಗೆ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾಗಿಯೂ ಮಾಹಿತಿ ನೀಡಿದರು.

ಹೆಲಿಕಾಪ್ಟರ್ ಅಪಘಾತಕ್ಕೀಡಾದ ವಿಷಯ ತಿಳಿಯುತ್ತಲೇ ರಾವತ್ ಮನೆಗೆ ಭೇಟಿ ನೀಡಿ, ಅವರ ಪುತ್ರಿಯೊಂದಿಗೆ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.