ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್‌ಕೋಟ್ ದುರಂತ | ಅಧಿಕಾರಿಗಳ ವಿರುದ್ಧ FIR ದಾಖಲು ಕೋರಿ ಅರ್ಜಿ: SITಗೆ ನೋಟಿಸ್

Published 30 ಮೇ 2024, 5:54 IST
Last Updated 30 ಮೇ 2024, 5:54 IST
ಅಕ್ಷರ ಗಾತ್ರ

ರಾಜ್‌ಕೋಟ್‌: ಟಿಆರ್‌ಪಿ ಗೇಮ್‌ಝೋನ್ ದುರಂತ ಸಂಬಂಧ ವರ್ಗಾವಣೆಗೊಂಡ ಹಾಗೂ ಅಮಾನತುಗೊಂಡ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಇಲ್ಲಿನ ನ್ಯಾಯಾಲಯ, ತನಿಖೆ ನಡೆಸುತ್ತಿರುವ ಎಸ್‌ಐಟಿಯಿಂದ ಮಾಹಿತಿ ಬಯಸಿ ನೋಟಿಸ್ ಜಾರಿ ಮಾಡಿದೆ.

ರಾಜ್‌ಕೋಟ್ ಪೊಲೀಸ್ ಆಯುಕ್ತ ರಾಜು ಭಾರ್ಗವ, ಪಾಲಿಕೆ ಆಯುಕ್ತ ಆನಂದ್ ಪಟೇಲ್, ವರ್ಗಾವಣೆಗೊಂಡ ಇಬ್ಬರು ಐ‍‍ಪಿಎಸ್‌ ಅಧಿಕಾರಿಗಳು ಹಾಗೂ ಅಮಾನತುಗೊಂಡ 9 ಅಧಿಕಾರಿಗಳನ್ನು ಕ್ರಿಮಿನಲ್ ವಿಚಾರಣೆಗೆ ಒಳಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಈ ಅಧಿಕಾರಿಗಳನ್ನು ವರ್ಗಾವಣೆ / ಅಮಾನತು ಮಾಡಿರುವ ಆಧಾರದ ಮೇಲೆ ಎಫ್‌ಐಆರ್‌ ದಾಖಲು ಮಾಡಬೇಕು. ಇವರ ಹೊಣೆಗೇಡಿತನದಿಂದಾಗಿ 27 ಮಂದಿಯ ಸಾವು ಸಂಭವಿಸಿದೆ. ಮೂರು–ನಾಲ್ಕು ವರ್ಷಗಳಿಂದ ಪರವಾನಗಿ ಇಲ್ಲದೆ ಗೇಮ್‌ ಝೋನ್ ಕಾರ್ಯಾಚರಣೆ ನಡೆಸಿತ್ತು ಎಂದು ಅರ್ಜಿದಾರರು ವಾದಿಸಿದ್ದರು.

ಇವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 304, 337 ಹಾಗೂ 338ರಡಿ ‍ಪ್ರಕರಣ ದಾಖಲಿಸಬೇಕು ಎಂದು ಕೋರಲಾಗಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಬಿ.ಪಿ ಠಾಕೂರ್‌, ಸದ್ಯ ಈ ಅಧಿಕಾರಿಗಳ ವಿರುದ್ಧ ನಡೆಯುತ್ತಿರುವ ವಿಚಾರಣೆಯ ಸ್ಥಿತಿಯನ್ನು ಜೂನ್ 20ರ ಒಳಗಾಗಿ ಸಲ್ಲಿಸಬೇಕು ಎಂದು ನಿರ್ದೇಶಿಸಿ ಎಸ್‌ಐಟಿಗೆ ನೋಟಿಸ್‌ ಜಾರಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT