ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಕಾಶ್ಮೀರ ಮತ್ತು ಲಡಾಕ್‌ನಲ್ಲಿನ ಬದಲಾವಣೆಯಿಂದ ಅಲ್ಲಿನ ಜನರಿಗೆ ಲಾಭವಾಗಲಿದೆ

Last Updated 14 ಆಗಸ್ಟ್ 2019, 14:52 IST
ಅಕ್ಷರ ಗಾತ್ರ

ನವದೆಹಲಿ:73ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಾಷ್ಟ್ರಪತಿ ರಾಮನಾಥ ಕೋವಿಂದ್ ದೇಶದ ಜನರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.

ಭಾಷಣದ ಮುಖ್ಯಾಂಶಗಳು

* ಭಾಷಣದ ಆರಂಭದಲ್ಲಿಯೇ ಮಹಾತ್ಮ ಗಾಂಧಿಯನ್ನು ಸ್ಮರಿಸಿದ ಕೋವಿಂದ್, ನಾವು ಇಂದು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅವರು ಅಂದೇ ಮುನ್ಸೂಚನೆ ನೀಡಿದ್ದರು.

*ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಜನರಿಗೆ ಲಾಭವಾಗುತ್ತದೆ.

*ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ನಲ್ಲಿ ಉಂಟಾದ ಬದಲಾವಣೆಗಳಿಂದ ಅಲ್ಲಿನ ಜನರಿಗೆ ಲಾಭವಾಗುತ್ತದೆ ಎಂಬ ದೃಢ ವಿಶ್ವಾಸ ನನಗಿದೆ. ದೇಶದ ಇತರ ಪ್ರಜೆಗಳಂತೆಯೇ ಅಲ್ಲಿನ ಜನರು ಸಮಾನ ಹಕ್ಕು, ಸಮಾನ ಸವಲತ್ತು ಮತ್ತು ಸಮಾನ ಸೌಲಭ್ಯಗಳನ್ನು ಅನುಭವಿಸುತ್ತಾರೆ. ಈ ವರ್ಷ ಶ್ರೇಷ್ಠ, ಅತಿ ಪ್ರತಿಭಾವಂತ ಹಾಗೂಪ್ರಭಾವಶಾಲಿ ವ್ಯಕ್ತಿ ಗುರು ನಾನಕ್ ದೇವ್ ಜೀ ಅವರ 550ನೇ ಜಯಂತಿಯನ್ನು ನಾವು ಆಚರಿಸಲಿದ್ದೇವೆ. ಸಿಖ್ ಧರ್ಮ ಸ್ಥಾಪಕರಾಗಿದ್ದ ಅವರಿಗೆ ಸಿಖ್ ಧರ್ಮದವರಿಂದ ಅಷ್ಟೇ ಅಲ್ಲ ಅದರಿಂದಾಚೆಗೂ ಹೆಚ್ಚಿನ ಗೌರವಾದರಗಳು ಲಭಿಸಿವೆ.

*ಕಾನೂನು ಮತ್ತು ಆದೇಶಗಳಲ್ಲಿ ಬದಲಾವಣೆ ತಂದಿರುವ ಕೇಂದ್ರದ ನಡೆಯ ಬಗ್ಗೆ ಮಾತನಾಡಿದ ಕೋವಿಂದ್, ಇದು ಅಭಿವೃದ್ಧಿ, ಸಮಾನತಾವಾದ ಮತ್ತು ಆರ್‌ಟಿಐಗೆ ಸಂಬಂಧಪಟ್ಟಂತೆ ಅವಕಾಶಗಳನ್ನು ಹೊಂದಿರುವ, ಶಿಕ್ಷಣದಲ್ಲಿ ಮೀಸಲಾತಿ ಮತ್ತು ಹಿಂದುಳಿದ ವರ್ಗಗಳಿರುವ ಉದ್ಯೋಗ ಮತ್ತು ಇತರ ಸೌಲಭ್ಯ, ತ್ರಿವಳಿ ತಲಾಖ್ ರದ್ದು ಮಾಡುವ ಮೂಲಕ ನಮ್ಮ ಹೆಣ್ಣು ಮಕ್ಕಳಿಗೆ ನ್ಯಾಯ ಸೇರಿದಂತೆ ಹಲವಾರು ಬದಲಾವಣೆಗಳನ್ನು ಒಳಗೊಂಡಿದೆ.

*ಕಳೆದ ಬೇಸಿಗೆಕಾಲದಲ್ಲಿ ದೇಶದ ಜವರು 17ನೇ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗಿಯಾಗಿದ್ದರು. ಇದಕ್ಕಾಗಿ ನಾನು ಮತದಾರರನ್ನು ಅಭಿನಂದಿಸುತ್ತೇವೆ. ಅವರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಮತಗಟ್ಟೆಗಳಿಗೆ ಹೋಗಿ ಮತದಾನ ಮಾಡಿದ್ದರು

*ಇತ್ತೀಚಿನ ಸಂಸತ್ ಕಲಾಪದಲ್ಲಿ ಹಲವು ಪ್ರಧಾನ ಮಸೂದೆಗಳಿಗೆ ಅಂಗೀಕಾರ ಲಭಿಸಿದೆ.ಮುಂದಿನ ಐದು ವರ್ಷಗಳಿಗಾಗಿ ಏನು ಪುನಸ್ಥಾಪಿಸಲಾಗುತ್ತದೆಯೋ ಅದಕ್ಕಿರುವ ಸೂಚನೆ ಇದು ಎಂದು ನಾನು ನಂಬುತ್ತೇನೆ.

*ಭಾರತೀಯರಿಗಿರುವುದು ಸಮಾನ ಕನಸುಗಳು.ಅಭಿವೃದ್ಧಿಯ ಕನಸು ಈಗ ಪರಿಣಾಮಕಾರಿ ಮತ್ತು ಪಾರದರ್ಶಕ ಸರ್ಕಾರದಿಂದ ಸಾಧ್ಯವಾಗುತ್ತಿದೆ.

*ಜನಾಭಿಪ್ರಾಯವನ್ನು ಪರಿಗಣಿಸುವುದು ಅವರ ಆಕಾಂಕ್ಷೆಗಳಿಗೆ ಸ್ಪಷ್ಟತೆ ಸಿಗುವಂತೆ ಮಾಡುತ್ತದೆ.ಸರ್ಕಾರದ ಕಡೆಯಿಂದ ಮಾಡಬೇಕಾದ ಕೆಲಸವನ್ನು ಅದು ದಕ್ಷತೆಯಿಂದ ಮಾಡಿದರೆ 1.3 ಶತಕೋಟಿ ಭಾರತೀಯರಿಗೆ ಹೆಚ್ಚಿನ ಪ್ರತಿಭೆ, ಸಂಶೋಧನೆ, ಕಲಾತ್ಮಕ ಮತ್ತು ವಾಣಿದ್ಯೋದ್ಯಮ ಅವಕಾಶಗಳು ಸಿಗುತ್ತವೆ.

*ದೇಶವನ್ನು ಕಟ್ಟುವುದೆಂದರೆ ಮತದಾರರು ಮತ್ತು ಅವರ ಪ್ರತಿನಿಧಿಗಳ ನಡುವಿನ, ಪ್ರಜೆಗಳು ಮತ್ತು ಅವರ ಸರ್ಕಾರದ, ನಾಗರಿಕ ಸಮಾಜ ಮತ್ತು ರಾಜ್ಯದ ನಡುವಿನ ಸಹಭಾಗಿತ್ವ ಆಗಿದೆ.

*ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗಲು, ದೊಡ್ಡ ಮಾರುಕಟ್ಟೆಗಳನ್ನು ತಲುಪಲು ರೈತರು ರಸ್ತೆಗಳನ್ನು ಬಳಸುವುದಾದರೆ ಮಾತ್ರ ಗ್ರಾಮೀಣ ರಸ್ತೆ ಮತ್ತು ಉತ್ತಮ ಸಂಪರ್ಕಕ್ಕೆ ಒಂದು ಅರ್ಥ ಸಿಗುತ್ತದೆ.

*ನಮ್ಮ ವಾಣಿಜ್ಯೋದ್ಯಮಿಗಳು ಅದು ಚಿಕ್ಕ ಸ್ಟಾರ್ಟ್ ಅಪ್‌ಗಳಾಗಿರಲಿ ಅಥವಾ ದೊಡ್ಡ ಉದ್ಯಮವೇ ಆಗಿರಲಿ, ಅವರು ಪ್ರಾಮಾಣಿಕ ಮತ್ತು ಅಸಾಧಾರಣ ಉದ್ದಿಮೆಗಳನ್ನು ಮಾಡಿ ಉದ್ಯೋಗವಕಾಶಗಳನ್ನು ಸೃಷ್ಟಿಸಿದರೆ ಆರ್ಥಿಕ ಸುಧಾರಣೆ ಮತ್ತು ವ್ಯವಸಾಯದಲ್ಲಿನ ಕಾನೂನುಗಳು ಅರ್ಥ ಪಡೆದುಕೊಳ್ಳುತ್ತವೆ.

*ದೇಶದಲ್ಲಿರುವ ಮಹಿಳೆಯರ ಸುಧಾರಣೆ, ಅವರ ಘನತೆಯನ್ನು ಹೆಚ್ಚಿಸುವ ಮತ್ತು ಜಗತ್ತಿಗೆ ತೆರೆದುಳ್ಳುವ ಮೂಲಕ ಸಾಧನೆ ಮಾಡುವ ಅವಕಾಶ ಸಿಕ್ಕಿದಾಗ ಮಾತ್ರ ಶೌಚಾಲಯ ಮತ್ತು ನೀರಿನ ಲಭ್ಯತೆಗೆ ಅರ್ಥ ಸಿಗುತ್ತದೆ.

*ಶತಮಾನಗಳಿಂದಲೂ ದೇಶದಲ್ಲಿ ಪೂರ್ವಗ್ರಹವಿರುವ ಸಮಾಜ ತುಂಬಾ ಅಪರೂಪ, ಬದುಕಿ ಬದುಕಲು ಬಿಡಿ ಎಂಬ ನಿಲುವು ಹೊಂದಿರುವ ಸಮಾಜ ಇಲ್ಲಿಯದ್ದು.ನಾವು ಬೇರೆ ಯಾವುದೇ ಧರ್ಮ, ಜಾತಿ ಅಥವಾ ನಂಬಿಕೆ, ನಂಬಿಕೆ ಇಲ್ಲದೇ ಇದ್ದರೂ ನಾವು ಅವರನ್ನು ಗೌರವಿಸುತ್ತೇವೆ.

*ನಮ್ಮ ರಾಜತಾಂತ್ರಿಕ ಪ್ರಯತ್ನಗಳಲ್ಲಿ ನಾವು ಕಂಡುಕೊಂಡಿರುವ ಸಹಕಾರವನ್ನು ನಾವು ಜಗತ್ತಿನ ಇತರ ಭಾಗಗಳಲ್ಲಿರುವ ರಾಷ್ಟ್ರಗಳ ಜತೆಗೂ ಹಂಚಿಕೊಳ್ಳುತ್ತೇವೆ.ನಾವು ನಮ್ಮ ಮುಂದಿನ ಜನಾಂಗಕ್ಕೆ ನೀಡಬಹುದಾದ ಬಹುದೊಡ್ಡ ಉಡುಗೊರೆ ಎಂದರೆ ಕ್ಲಾಸ್‌ರೂಂಗಳಲ್ಲಿ ಪ್ರೋತ್ಸಾಹ ಮತ್ತು ಕುತೂಹಲವನ್ನು ಹುಟ್ಟಿಸುವುದು.

*ಯಾವುದೇ ಒಂದು ದುರ್ಬಲವಾದ ದನಿಯನ್ನು ಭಾರತ ಕೇಳದೇ ಇರುವುದಿಲ್ಲ ಎಂಬುದರಲ್ಲಿ ನನಗೆ ನಂಬಿಕೆ ಇದೆ. ಪುರಾತನ ಆದರ್ಶವಾದ ಆಗಿರಲಿ ಅಥವಾ ಸಾಹಸವೇ ಆಗರಲಿ ಅದನ್ನು ಅಲ್ಲಗೆಳೆಯುವುದಿಲ್ಲ.

*ಚಂದ್ರ ಮತ್ತು ಮಂಗಳನ ಬಗ್ಗೆ ಅನ್ವೇಷಣೆ ಮಾಡಿದ ಜನರು ನಾವು, ಹುಲಿಗಳ ಸಂರಕ್ಷಕರೂ ನಾವೇ. ಇದು ಭಾರತೀಯರ ಗುಣ, ನಾವು ಪ್ರಕೃತಿ ಮತ್ತು ಎಲ್ಲ ಜೀವಜಾಲಗಳ ಜತೆ ಹೊಂದಾಣಿಕೆಯಿಂದಿರುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT