ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ್‌ ಉದ್ಯಾನ: ಇದೇ ಮೊದಲ ಸಲ ವರ್ಷದಲ್ಲಿ 2ನೇ ಬಾರಿ ಸಾರ್ವಜನಿಕರ ಭೇಟಿಗೆ ಅವಕಾಶ

Published 16 ಆಗಸ್ಟ್ 2023, 10:31 IST
Last Updated 16 ಆಗಸ್ಟ್ 2023, 10:31 IST
ಅಕ್ಷರ ಗಾತ್ರ

ನವದೆಹಲಿ: ಐತಿಹಾಸಿಕ ಅಮೃತ್‌ ಉದ್ಯಾನವನ್ನು ಸಾರ್ವಜನಿಕರಿಗಾಗಿ ಮುಂದಿನ ಒಂದು ತಿಂಗಳವರೆಗೆ ತೆರಯಲಾಗುತ್ತದೆ ಎಂದು ರಾಷ್ಟ್ರಪತಿ ಭವನ ಬುಧವಾರ ಹೇಳಿಕೆ ಬಿಡುಗಡೆ ಮಾಡಿದೆ.

'ಸಾರ್ವಜನಿಕರ ಭೇಟಿಗಾಗಿ ಅಮೃತ ಉದ್ಯಾನವನ್ನು ಮತ್ತೊಮ್ಮೆ ಒಂದು ತಿಂಗಳವರೆಗೆ ತೆರೆಯಲಾಗುತ್ತದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2023ರ ಆಗಸ್ಟ್‌ 14ರಂದು ಉದ್ಯಾನ ಉತ್ಸವ–2ಕ್ಕೆ ಚಾಲನೆ ನೀಡಿದ್ದಾರೆ. ಆಗಸ್ಟ್‌ 16ರಿಂದ ಸೆಪ್ಟೆಂಬರ್‌ 17ರ ವರೆಗೆ ಉದ್ಯಾನಕ್ಕೆ ಆಗಮಿಸಲು ಎಲ್ಲರಿಗೂ ಸ್ವಾಗತ' ಎಂದು ರಾಷ್ಟ್ರಪತಿ ಭವನ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರಪತಿ ಭವನದ ಉದ್ಯಾನವು ವರ್ಷವೊಂದರಲ್ಲಿ ಎರಡನೇ ಬಾರಿಗೆ ಸಾರ್ವಜನಿಕರ ಭೇಟಿಗೆ ಮುಕ್ತವಾಗುತ್ತಿರುವುದು ಇದೇ ಮೊದಲು.

ಈ ವರ್ಷ ಜನವರಿ 29ರಿಂದ ಮಾರ್ಚ್‌ 31ರವರೆಗೆ ನಡೆದ ಉದ್ಯಾನ ಉತ್ಸವ–1ರ ಅವಧಿಯಲ್ಲಿ ಸುಮಾರು 10 ಲಕ್ಷ ಜನರು ಉದ್ಯಾನಕ್ಕೆ ಭೇಟಿ ನೀಡಿದ್ದರು.

ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಆನ್‌ಲೈನ್‌ ಮೂಲಕ ರಾಷ್ಟ್ಟಪತಿ ಭವನದ ವೆಬ್‌ಸೈಟ್‌ನಲ್ಲಿ (https://visit.rashtrapatibhavan.gov.in/) ನೋಂದಣಿ ಮಾಡಿಕೊಳ್ಳಬಹುದು. ಉದ್ಯಾನದ ಗೇಟ್‌ ಸಂಖ್ಯೆ 35ರಲ್ಲಿ ನೇರವಾಗಿ ಪಾಸ್‌ ಪಡೆಯುವುದಕ್ಕೂ ಅವಕಾಶವಿದೆ.

ರಾಷ್ಟ್ರಪತಿಗಳ ಅಧಿಕೃತ ನಿವಾಸದಲ್ಲಿರುವ ಅಮೃತ್‌ ಉದ್ಯಾನವನ್ನು ಈ ಹಿಂದೆ ಮೊಘಲ್ ಉದ್ಯಾನ ಎನ್ನಲಾಗುತ್ತಿತ್ತು. 'ದೇಶದ ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ' ಆಚರಣೆಯ ಭಾಗವಾಗಿ ಉದ್ಯಾನದ ಹೆಸರನ್ನು 'ಅಮೃತ್‌ ಉದ್ಯಾನ' ಎಂದು ಮರುನಾಮಕರಣ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT