ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೆಹಲೋತ್‌ ಸರ್ಕಾರವಲ್ಲ, ‘ಗ್ರೆಹ್‌–ಲೂಟಿ’ ಸರ್ಕಾರ: ನಡ್ಡಾ ಕಿಡಿ

Published : 30 ಜುಲೈ 2023, 8:55 IST
Last Updated : 30 ಜುಲೈ 2023, 8:55 IST
ಫಾಲೋ ಮಾಡಿ
Comments

ಜೈಪುರ: ಸಚಿವ ಸ್ಥಾನದಿಂದ ವಜಾಗೊಂಡಿರುವ ರಾಜೇಂದ್ರ ಗುಧಾ ಅವರ 'ಕೆಂಪು ಡೈರಿ' ಉಲ್ಲೇಖಿಸಿರುವ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಸಿಎಂ ಅಶೋಕ್ ಗೆಹಲೋತ್ ಸರ್ಕಾರದ ಅಕ್ರಮಗಳು ಬಹಿರಂಗವಾಗಿದೆ ಎಂದು ಆರೋಪಿಸಿದ್ದಾರೆ.

ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆ.ಪಿ ನಡ್ಡಾ, ಇದು ಗೆಹಲೋತ್‌ ಸರ್ಕಾರವಲ್ಲ, ಇದು ‘ಗ್ರೆಹ್‌–ಲೂಟಿ’ ಸರ್ಕಾರ ಎಂದು ವ್ಯಂಗ್ಯವಾಡಿದರು. ದೆಹಲಿಯಲ್ಲಿರುವ ತಮ್ಮ ವರಿಷ್ಠರ ಬೊಕ್ಕಸ ತುಂಬಿಸಲು ಸಿಎಂ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಂಬರುವ ವಿಧಾನಸಭೆ ಚುನಾವಣೆ ಕಾರ್ಯತಂತ್ರವನ್ನು ರೂಪಿಸಲು ಜೆ.ಪಿ ನಡ್ಡಾ ಅಧ್ಯಕ್ಷತೆಯಲ್ಲಿ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಸಲಾಯಿತು. ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡುವ ನಿರೀಕ್ಷೆಯಿರುವ ವರ್ಷಾಂತ್ಯದ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಪದಾಧಿಕಾರಿಗಳ ಹೊಸ ಪಟ್ಟಿಯಲ್ಲಿ, ತಂಡವನ್ನು ಮರು ಜೋಡಿಸುವ ಅಗತ್ಯವಿದೆ ಎಂದು ನಡ್ಡಾ ಹೇಳಿದರು.

ನರೇಂದ್ರ ಮೋದಿ ಸರ್ಕಾರ ನೀತಿಗಳು ಬಡವರು, ರೈತರು, ದಲಿತರು, ಯುವಕರು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸಿವೆ. ಮುಂಬರುವ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಜನರು ಬಿಜೆಪಿಗೆ ಏಕಪಕ್ಷೀಯ ಆಶೀರ್ವಾದ ನೀಡಲಿದ್ದಾರೆ ಎಂಬುದು ನನಗೆ ಖಚಿತವಾಗಿದೆ. ಇದರೊಂದಿಗೆ 2024ರ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿ ಗೆಲ್ಲಿಸಲು ಜನರು ಉತ್ಸುಕರಾಗಿದ್ದಾರೆ ಎಂದು ಜೆ. ಪಿ ನಡ್ಡಾ ತಿಳಿಸಿದರು.

ಗೆಹಲೋತ್‌ ಸರ್ಕಾರದಲ್ಲಿ ಎಲ್ಲರೂ ರಾಜ್ಯವನ್ನು ಲೂಟಿ ಮಾಡುವಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಜನರು ‘ಭ್ರಷ್ಟಾಚಾರದಿಂದ ಬೇಸತ್ತಿದ್ದಾರೆ’. ಆದರೆ, ಜನರು ಇನ್ನು ಮುಂದೆ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ನಡ್ಡಾ ಹೇಳಿದರು.

ಜುಲೈ 2020 ರಲ್ಲಿ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿ ಸಂದರ್ಭದಲ್ಲಿ ಸಿಎಂ ಅಶೋಕ್‌ ಗೆಹಲೋತ್‌ ನಿರ್ದೇಶನ ಮೇರೆಗೆ ಕಾಂಗ್ರೆಸ್‌ ನಾಯಕ ಧರ್ಮೇಂದ್ರ ರಾಥೋಡ್‌ ಅವರ ನಿವಾಸದಿಂದ ಕೆಂಪು ಡೈರಿಯನ್ನು ತೆಗೆದುಕೊಂಡಿದ್ದು, ಇದರಲ್ಲಿ ಗೆಹಲೋತ್‌ ಅವರ ಹಣಕಾಸು ವಹಿವಾಟಿನ ವಿವರಗಳಿವೆ ಎಂದು ರಾಜೇಂದ್ರ ಗುಧಾ ಹೇಳಿದ್ದರು.

ಅಂತಹ ಯಾವುದೇ ಡೈರಿ ಅಸ್ತಿತ್ವದಲ್ಲಿಲ್ಲ ಇದೊಂದು ಕಾಲ್ಪನಿಕ ಡೈರಿಯಾಗಿದ್ದು, ಅದನ್ನು ಇಟ್ಟುಕೊಂಡು ರಾಜಕೀಯ ಮಾಡಲಾಗುತ್ತಿದೆ ಎಂದು ಗೆಹಲೋತ್‌ ಆರೋಪವನ್ನು ತಳ್ಳಿಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT