ಮುಂಬೈ: ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಅಧಿಕಾರಿಗಳು, ನಟಿ ರಿಯಾ ಚಕ್ರವರ್ತಿ ಅವರನ್ನು ಭಾನುವಾರ ಸುಮಾರು ಆರು ತಾಸು ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಈ ವಿಚಾರಣೆ ನಡೆದಿದೆ.

ಬಳಿಕ ಮಾಹಿತಿ ನೀಡಿದ ಎನ್‌ಸಿಬಿಯ ಉಪ ಮಹಾನಿರ್ದೇಶಕ ಎಂ. ಅಶೋಕ್ ಜೈನ್, ‘ಹೇಳಿಕೆ ದಾಖಲಿಸುವ ಮತ್ತು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುವ ಸಲುವಾಗಿ ರಿಯಾ ಅವರನ್ನು ಸೋಮವಾರ ಕಚೇರಿಗೆ ಕರೆಸಲಾಗುವುದು’ ಎಂದಿದ್ದಾರೆ.

‘ಬಂಧಿತ ಆರೋಪಿ ಕೈಸನ್ ಎಬ್ರಾಹಿಂ ಅವರು ನೀಡಿರುವ ಮಾಹಿತಿಯ ಆಧಾರದಲ್ಲಿ ಅಂಜು ಕೇಶ್ವಾನಿ ಎಂಬುವರ ಮನೆಯಲ್ಲಿ ಶೋಧ ನಡೆಸಲಾಗಿದೆ. ಆಮದು ಮಾಡಿರುವ ಡ್ರಗ್ಸ್, ₹ 1.85 ಲಕ್ಷ ನಗದು ಹಾಗೂ ₹5,000 ಮೌಲ್ಯದ ಇಂಡೊನೇಷ್ಯಾ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅಶೋಕ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.