ಡೆಹ್ರಾಡೂನ್: ತಾಂತ್ರಿಕ ದೋಷದಿಂದಾಗಿ ಉತ್ತರಾಖಂಡದ ಬಿಜೆಪಿ ಶಾಸಕ ಕಿಶೋರ್ ಉಪಾಧ್ಯಾಯ ಸೇರಿದಂತೆ 40ಕ್ಕೂ ಹೆಚ್ಚು ಭಕ್ತರು ಇಲ್ಲಿನ ರೋಪ್ವೇನಲ್ಲಿ ಒಂದು ಗಂಟೆಗೂ ಹೆಚ್ಚುಕಾಲ ಸಿಲುಕಿದ್ದ ಘಟನೆ ಭಾನುವಾರ ನಡೆದಿದೆ.

ಮಸ್ಸೂರಿ ಸಮೀಪದ ಸುರ್ಕಂದ ದೇವಿ ದೇವಸ್ಥಾನವನ್ನು ಸಂಪರ್ಕಿಸುವ ರೋಪ್ ವೇ ಮಾರ್ಗದಲ್ಲಿ ಈ ಘಟನೆ ನಡೆದಿದೆ. ರಕ್ಷಣಾ ಕಾರ್ಯಾಚರಣೆಯ ಬಳಿಕ ಶಾಸಕ ಸೇರಿದಂತೆ ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉತ್ತರಾಖಂಡ ರಚನೆಯಾದ ನಂತರ ರಾಜ್ಯ ಪ್ರವಾಸೋದ್ಯಮ ಇಲಾಖೆ ಆರಂಭಿಸಿದ ಮೊದಲ ರೋಪ್ವೇ ಯೋಜನೆ ಇದಾಗಿದೆ. ಸುಮಾರು 502 ಮೀಟರ್ ಉದ್ದದ ರೋಪ್ವೇಯನ್ನು ₹ 5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ರೋಪ್ ವೇ ನ್ಯೂನತೆ ಪತ್ತೆ ಹಚ್ಚಲು: ಎನ್ಡಿಆರ್ಎಫ್ ಸಮೀಕ್ಷೆ
ಕೇಬಲ್ ಕಾರುಗಳು ಮತ್ತು ರೋಪ್ ವೇ ವ್ಯವಸ್ಥೆಯಲ್ಲಿ ಸಂಭವನೀಯ ಭದ್ರತಾ ನ್ಯೂನತೆಗಳನ್ನು ಪತ್ತೆ ಹಚ್ಚಲು ಮತ್ತು ತುರ್ತು ಸಂದರ್ಭದಲ್ಲಿ ಪರಿಣಾಮಕಾರಿ ರಕ್ಷಣಾ ಕಾರ್ಯಾಚರಣೆಗೆ ಕುರಿತು ನೀಲನಕ್ಷೆ ತಯಾರಿಸುವ ಸಲುವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್ಡಿಆರ್ಎಫ್) ರಾಷ್ಟ್ರವ್ಯಾಪಿ ಸಮೀಕ್ಷೆ ಆರಂಭಿಸಿದೆ.

ಉತ್ತರಾಖಂಡದಲ್ಲಿ ಭಾನುವಾರ ನಡೆದ ಘಟನೆ ಸೇರಿದಂತೆ ಈ ವರ್ಷ ಇಲ್ಲಿಯವರೆಗೆ ದೇಶದಲ್ಲಿ ಇದುವರೆಗೆ ರೋಪ್ವೇ ಸಂಬಂಧಿತನಾಲ್ಕು ಘಟನೆಗಳು ವರದಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.