ಅದು ಚಳಿಗಾಲದಲ್ಲಿ ನೀಡಿದ ಸಂದರ್ಶನದ ವಿಡಿಯೊ. ಚುನಾವಣೆ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ
– ಮಣಿಶಂಕರ್ ಅಯ್ಯರ್ ಕಾಂಗ್ರೆಸ್ ಮುಖಂಡ
ವಿಡಿಯೊದಲ್ಲಿ ಏನಿದೆ...
‘ಪಾಕಿಸ್ತಾನವು ಸಾರ್ವಭೌಮ ದೇಶವಾಗಿದ್ದು ಭಾರತ ಅದನ್ನು ಗೌರವಿಸಬೇಕು. ಅಲ್ಲದೆ ಅದು ಪರಮಾಣ ಬಾಂಬ್ ಹೊಂದಿರುವ ದೇಶವಾಗಿರುವುದರಿಂದ ಮಾತುಕತೆಯಲ್ಲಿ ತೊಡಗಬೇಕು’ ಎಂದು ಮಣಿಶಂಕರ್ ಅಯ್ಯರ್ ಅವರು ಹೇಳಿದ್ದಾರೆ. ಒಂದು ವೇಳೆ ಅಲ್ಲಿ ‘ಹುಚ್ಚು ವ್ಯಕ್ತಿ’ಯೊಬ್ಬ ಅಧಿಕಾರಕ್ಕೆ ಬಂದು ಅಣುಬಾಂಬ್ ಪ್ರಯೋಗಿಸಿದರೆ ಬಳ್ಳೆಯದಾಗುವುದಿಲ್ಲ. ಅದರ ಪರಿಣಾಮ ನಾವು ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ‘ನಾವು ಅವರಿಗೆ ಗೌರವ ನೀಡದಿದ್ದರೆ ಅವರು ಭಾರತದ ಮೇಲೆ ಪರಮಾಣು ಬಾಂಬ್ ಬಳಸಲು ಯೋಜಿಸಬಹುದು. ಪಾಕಿಸ್ತಾನವು ಕಹುಟಾದಲ್ಲಿ (ರಾವಲ್ಪಿಂಡಿ) ಸ್ನಾಯುಗಳನ್ನು ಹೊಂದಿದೆ ಎಂಬುದನ್ನು ನಾವು ಮರೆಯಬಾರದು’ ಎಂದು ಅವರು ಪರಮಾಣು ಬಾಂಬ್ ಅನ್ನು ಉಲ್ಲೇಖಿಸಿದ್ದಾರೆ.