ನವದೆಹಲಿ: ಮಣಿಪುರದ ಹಿಂಸಾಚಾರ ಕುರಿತ ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ರಾಜ್ಯಸಭೆಯಲ್ಲಿ ಪೈರಸಿ ತಡೆ ಮತ್ತು ಪರವಾನಗಿ ಕಾರ್ಯವಿಧಾನವನ್ನು ಸರಳಗೊಳಿಸುವ ಸಿನಿಮಾಟೋಗ್ರಾಫ್ ಕಾಯಿದೆ, 1952ಕ್ಕೆ ತಿದ್ದುಪಡಿ ತರುವ ಮಸೂದೆಯನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು.

ಮಸೂದೆಯಲ್ಲಿ, ಚಲನಚಿತ್ರಗಳ ಪೈರಸಿ ಪ್ರಕರಣಗಳಲ್ಲಿ ಅಪರಾಧಿಗೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ಚಲನಚಿತ್ರ ನಿರ್ಮಾಣ ವೆಚ್ಚದ ಶೇಕಡ 5 ರಷ್ಟು ದಂಡ ವಿಧಿಸುವ ಕಠಿಣ ನಿಯಮವನ್ನು ಇದರಲ್ಲಿ ಸೇರಿಸಲಾಗಿದೆ.

ಸಿನಿಮಾಗಳಿಗೆ ನೀಡಲಾಗುವ 'UA' ಸರ್ಟಿಫಿಕೇಟ್ ಅಡಿಯಲ್ಲಿ ವಯಸ್ಸಿನ-ಆಧಾರದ ಮೇಲೆ ಮೂರು ಪ್ರಮಾಣಪತ್ರಗಳನ್ನು ನೀಡುವ ಪ್ರಸ್ತಾವವನ್ನೂ ಸೇರಿಸಲಾಗಿದೆ. ಅವುಗಳೆಂದರೆ 'UA 7+', 'UA 13+' ಮತ್ತು 'UA 16+'. ಇದರ ಜೊತೆಗೆ, ದೂರದರ್ಶನ ಅಥವಾ ಇತರ ಮಾಧ್ಯಮಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಪ್ರತ್ಯೇಕ ಪ್ರಮಾಣಪತ್ರ ನೀಡಲು ಸಿಬಿಎಫ್‌ಸಿಗೆ ಈ ಮಸೂದೆ ಅಧಿಕಾರ ನೀಡುತ್ತದೆ.

ಚಲನಚಿತ್ರಗಳ ಪೈರಸಿಯನ್ನು ತಡೆಯುವ ಪ್ರಯತ್ನದಲ್ಲಿ, ಚಲನಚಿತ್ರಗಳ ಅನಧಿಕೃತ ರೆಕಾರ್ಡಿಂಗ್ (ಸೆಕ್ಷನ್ 6AA) ಮತ್ತು ಅವುಗಳ ಪ್ರದರ್ಶನವನ್ನು ನಿಷೇಧಿಸುವ (ಸೆಕ್ಷನ್ 6AB)ನಿಬಂಧನೆಗಳೊಂದಿಗೆ ಸಿನಿಮಾಟೋಗ್ರಾಫ್ ಕಾಯಿದೆಯಲ್ಲಿ ಹೊಸ ಸೆಕ್ಷನ್ ಪರಿಚಯಿಸಲು ಮಸೂದೆ ಅನುವು ಮಾಡಿಕೊಡುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.