ಶ್ರೀನಗರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಕುರಿತಾಗಿ ‘ತಪ್ಪು ಕಲ್ಪನೆಗಳನ್ನು‘ ನಿವಾರಿಸುವ ಉದ್ದೇಶದಿಂದ ಶುಕ್ರವಾರ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ‘ಧ್ವಜ ಯಾತ್ರೆ’ ಆರಂಭವಾಗಿದೆ.

ಇಲ್ಲಿನ ಐತಿಹಾಸಿಕ ಲಾಲ್ಚೌಕ್ನಿಂದ ಯಾತ್ರೆ ಆರಂಭವಾಯಿತು. ನೂರಾರು ಕಾರ್ಯಕರ್ತರು ದೇಶದ ವಿವಿಧ ಭಾಗಗಳತ್ತ ವಾಹನಗಳ ಮೂಲಕ ತೆರಳಿದರು.

ಆರ್ಎಸ್ಎಸ್ ಕೆಲ ಜನರ ವಿರುದ್ಧ ಇದೆ ಎಂಬ ‘ತಪ್ಪು ಕಲ್ಪನೆ‘ಯನ್ನು ನಿವಾರಿಸುವುದೇ ಈ ಯಾತ್ರೆಯ ಉದ್ದೇಶ. ಈ ಮೂಲಕ ನಾವು ಜನರಿಗೆ ಸರಿಯಾದ ಸಂದೇಶ ರವಾನಿಸುವುದಾಗಿದೆ ಎಂದುಆರ್ಎಸ್ಎಸ್ನ ವೀರ ಕಪೂರ್ ತಿಳಿಸಿದ್ದಾರೆ.

ಆರ್ಎಸ್ಎಸ್ ಪ್ರಾರಂಭವಾಗಿ ನೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಂಘಟನೆ ಮಾಡಿದ ಕಾರ್ಯಗಳನ್ನು ಪ್ರತಿಬಿಂಬಿಸುವ ‘ಶತಕ್’ ಎಂಬ ಸಿನಿಮಾ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದರು. ಆ ಚಿತ್ರ ಫೆಬ್ರುವರಿ 19ರಂದು ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.