ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಧಾನ್ಯ ರಫ್ತು ಸ್ಥಗಿತ: ಉಕ್ರೇನ್ ಅಳಲು– ಯುದ್ಧ ಕಾಲದ ಒಪ್ಪಂದ ಮುರಿದ ಪುಟಿನ್

Published 18 ಜುಲೈ 2023, 15:31 IST
Last Updated 18 ಜುಲೈ 2023, 15:31 IST
ಅಕ್ಷರ ಗಾತ್ರ

ಕೀವ್‌: ಒಡೆಸಾ ಬಂದರನ್ನು ಗುರಿಯಾಗಿಸಿ ರಷ್ಯಾ ನಡೆಸಿದ ದಾಳಿಗೆ ಪ್ರತ್ಯುತ್ತರವಾಗಿ ರಕ್ಷಣಾ ಪಡೆಗಳು ಮಂಗಳವಾರ ಪ್ರತಿದಾಳಿ ನಡೆಸಿವೆ. ಇದಕ್ಕೆ ಪ್ರತೀಕಾರವಾಗಿ ಪುಟಿನ್ ಸರ್ಕಾರವು ಯುದ್ಧ ಕಾಲದ ಒಪ್ಪಂದವನ್ನು ಮುರಿದಿದೆ. ಹಾಗಾಗಿ, ಕಪ್ಪು ಸಮುದ್ರದ ಮೂಲಕ ಬೇರೆ ದೇಶಗಳಿಗೆ ಆಹಾರ ಧಾನ್ಯಗಳ ಸಾಗಣೆ ಸ್ಥಗಿತಗೊಂಡಿದೆ ಎಂದು ಉಕ್ರೇನ್‌ ದೂರಿದೆ.

ರಷ್ಯಾವು ಮೊದಲಿಗೆ ಡ್ರೋನ್‌ಗಳ ಮೂಲಕ ವಾಯುಪಡೆಯನ್ನು ಗುರಿಯಾಗಿಸಿಕೊಂಡು ದಾಳಿಗೆ ಪ್ರಯತ್ನಿಸಿತ್ತು. ಬಳಿಕ ಬಂದರನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳ ಮೂಲಕ ದಾಳಿಗೆ ಯತ್ನಿಸಿತ್ತು. ಇದನ್ನು ರಕ್ಷಣಾ ಪಡೆಗಳು ವಿಫಲಗೊಳಿಸಿವೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಬಂದರು ಪ್ರದೇಶದ ಮೇಲೆ ಒಟ್ಟು ಆರು ಕ್ಷಿಪಣಿಗಳು ಮತ್ತು 25 ಡ್ರೋನ್‌ಗಳ ಮೂಲಕ ದಾಳಿಗೆ ಯತ್ನಿಸಿತ್ತು. ಇವುಗಳನ್ನು ಹೊಡೆದುರುಳಿಸಲಾಗಿದೆ. ಆದರೆ, ಕೆಲವು ಕಟ್ಟಡಗಳ ಮೇಲೆ ಕ್ಷಿಪಣಿಗಳ ಅವಶೇಷ ಬಿದ್ದು ಹಾನಿಯಾಗಿದೆ. ಮನೆಯಲ್ಲಿದ್ದ ಹಿರಿಯ ನಾಗರಿಕರೊಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. 

‘ಉಕ್ರೇನ್‌ನಿಂದ ಕಪ್ಪು ಸಮುದ್ರದ ಮೂಲಕ ಹಡಗುಗಳಲ್ಲಿ ಆಫ್ರಿಕಾ, ಮಧ್ಯಪ್ರಾಚ್ಯ ಹಾಗೂ ಏಷ್ಯಾದ ಹಲವು ದೇಶಗಳಿಗೆ ಆಹಾರ ಧಾನ್ಯಗಳನ್ನು ರಫ್ತು ಮಾಡಲಾಗುತ್ತದೆ. ಇದಕ್ಕೆ ಅನುಮತಿಸಿದ್ದ ಯುದ್ಧಕಾಲದ ಒಪ್ಪಂದವನ್ನು ರಷ್ಯಾ ಈಗ ಮುರಿದಿದೆ. ಹಾಗಾಗಿ, ನಮ್ಮ ದೇಶದ ಆಹಾರ ಧಾನ್ಯಗಳನ್ನು ಅವಲಂಬಿಸಿರುವ ಜನರಿಗೆ ತೊಂದರೆಯಾಗಿದೆ’ ಎಂದು ಉಕ್ರೇನ್‌ ಅಧ್ಯಕ್ಷರ ಕಚೇರಿಯ ಮುಖ್ಯಸ್ಥ ಆಂಡ್ರಿ ಯೆರ್ಮಾಕ್ ಹೇಳಿದ್ದಾರೆ. 

‘ಹಸಿವಿನ ಮೂಲಕ ಜನರನ್ನು ಕೊಲ್ಲುವುದೇ ಪುಟಿನ್ ಸರ್ಕಾರದ ಗುರಿ. ಜೊತೆಗೆ, ವಿಶ್ವದಲ್ಲಿ ನಿರಾಶ್ರಿತರ ಸಂಖ್ಯೆ ಹೆಚ್ಚಾಗಲಿ ಎಂದು ಅಪೇಕ್ಷಿಸುತ್ತಿದೆ. ರಷ್ಯಾದ ಈ ಧೋರಣೆಯು ಇಡೀ ಜಗತ್ತಿಗೆ ಅರ್ಥವಾಗುತ್ತಿದೆ’ ಎಂದು ಜರಿದಿದ್ದಾರೆ.

ರಷ್ಯಾದ ಈ ನಡೆಗೆ ವಿಶ್ವಸಂಸ್ಥೆ ಹಾಗೂ ಉಕ್ರೇನ್‌ ಮಿತ್ರ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT