ಸಂಭಲ್: ಕಳೆದ ವರ್ಷ ಇಲ್ಲಿನ ಶಾಹಿ ಜುಮಾ ಮಸೀದಿ ಸಮೀಕ್ಷೆ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ದೀಲಿಪ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶರೀಕ್ ಸತ್ಥಾ ನೇತೃತ್ವದ ಗ್ಯಾಂಗ್ನಲ್ಲಿ ಗುರುತಿಸಿಕೊಂಡಿದ್ದ ದಿಲೀಪ್ ಅಲಿಯಾಸ್ ಹರೀಶ್ ಸುಮಾರು 30 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು ಪೊಲೀಸರಿಗೆ ಬೇಕಾಗಿದ್ದ. ಇವನ ಸುಳಿವು ಕೊಟ್ಟವರಿಗೆ ₹ 25 ಸಾವಿರ ಬಹುಮಾನ ಘೋಷಣೆ ಮಾಡಲಾಗಿತ್ತು.
.Sambhal Violence | SP ಸಂಸದ ರೆಹಮಾನ್ ಬಾರ್ಕ್ಗೆ ನೋಟಿಸ್ ಜಾರಿ ಮಾಡಿದ SIT.Sambhal Violence: ಸಂಭಲ್ ಜಮಾ ಮಸೀದಿಯ ಅಧ್ಯಕ್ಷರನ್ನು ವಶಕ್ಕೆ ಪಡೆದ ಎಸ್ಐಟಿ.
ಕಳೆದ ವರ್ಷ ನವೆಂಬರ್ 24 ರಂದು ಎರಡನೇ ಸುತ್ತಿನ ಸಮೀಕ್ಷೆಯ ಸಂದರ್ಭದಲ್ಲಿ, ಪ್ರತಿಭಟನಾನಿರತ ಸ್ಥಳೀಯರು ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಘರ್ಷಣೆ, ಹಿಂಸಾಚಾರಕ್ಕೆ ತಿರುಗಿತ್ತು. ಘಟನೆಯಲ್ಲಿ ನಾಲ್ವರು ಸಾವಿಗೀಡಾಗಿ, ಹಲವರು ಗಾಯಗೊಂಡಿದ್ದರು.

ಸ್ಥಳದಲ್ಲಿದ್ದ ದೇಗುಲವನ್ನು ಕೆಡವಿ ಮೊಘಲ್ ದೊರೆ 1526 ರಲ್ಲಿ ಮಸೀದಿ ನಿರ್ಮಿಸಿದ್ದ ಎಂದು ಪ್ರತಿಪಾದಿಸಿದ್ದ ಹಿಂದೂ ಸಂಘಟನೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಮಸೀದಿಯ ಸಮೀಕ್ಷೆಗೆ ನ್ಯಾಯಾಲಯ ಆದೇಶಿಸಿತ್ತು.
.Sambhal Violence: ಸಂಭಾಲ್ ಹಿಂಸಾಚಾರ ಪ್ರಕರಣದಲ್ಲಿ ಮತ್ತೊಬ್ಬ ಬಂಧನ.Sambhal Violence | ಲೋಕಸಭೆಯಲ್ಲಿ ಮತ್ತೆ ಗದ್ದಲ; ವಿಪಕ್ಷಗಳಿಂದ ಸಭಾತ್ಯಾಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.