ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನಾತನ ಧರ್ಮ ಇತರ ಮತಗಳನ್ನು ದೂರ ಇಡುವಂತೆ ಬೋಧಿಸುವುದಿಲ್ಲ: ಕಮಲ್ ನಾಥ್

Published 15 ಸೆಪ್ಟೆಂಬರ್ 2023, 13:05 IST
Last Updated 15 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಭೋಪಾಲ್ (ಪಿಟಿಐ): ‘ಭಾರತ ಹಲವಾರು ಮತಗಳಿಗೆ ಆಶ್ರಯ ನೀಡಿದ್ದು,  ಸನಾತನ ಧರ್ಮವು ಯಾವುದೇ ಮತ, ನಂಬಿಕೆಗಳನ್ನು ದೂರವಿಡುವಂತೆ ಯಾರಿಗೂ ಬೋಧಿ ಸುವುದಿಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕಮಲ್ ನಾಥ್ ಶುಕ್ರವಾರ ಹೇಳಿದ್ದಾರೆ.

ಅಶೋಕನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಕಮಲ್‌ ನಾಥ್‌, ‘ನಾವೆಲ್ಲರೂ ಸನಾತನ ಧರ್ಮವನ್ನು ಒಪ್ಪಿಕೊಂಡಿದ್ದು, ಇದರ ಬಗ್ಗೆ ಪ್ರತಿಯೊಬ್ಬರಿಗೂ ಹೇಳುವ ಅಗತ್ಯ ಇಲ್ಲ’ ಎಂದರು.

ವಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’, ಸನಾತನ ಧರ್ಮವನ್ನು ನಾಶ ಮಾಡಲು ಯತ್ನಿಸುತ್ತಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ ಬೆನ್ನಲ್ಲೇ, ಕಮಲ್‌ ನಾಥ್‌ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

‘ನಮ್ಮ ದೇಶದಲ್ಲಿ ಇತರ ಮತಗಳನ್ನು ಪಾಲಿಸುವ ಜನರೂ ಇದ್ದಾರೆ. ಹೀಗಾಗಿ ನಮ್ಮದು ಸನಾತನ ಧರ್ಮದ ರಾಷ್ಟ್ರ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದೂ ಹೇಳಿದರು.

ಸಂಸ್ಕೃತಿ ನಾಶ ಮಾಡುವುದೇ ‘ಇಂಡಿಯಾ’ ಗುರಿ: ಶರ್ಮಾ

ಪಟ್ನಾ(ಪಿಟಿಐ): ‘ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗಳು ಸನಾತನ ಧರ್ಮವನ್ನು ಸಂರಕ್ಷಿಸುವ ಸಲುವಾಗಿ ದೇಶದ ಜನರೇ ನಡೆಸುವ ‘ನಾಗರಿಕತೆಯ ಹೋರಾಟ’ವಾಗಲಿದೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶುಕ್ರವಾರ ಹೇಳಿದ್ದಾರೆ.

ನಗರದ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯನ್ನು ನಾಶ ಮಾಡುವುದೇ ‘ಇಂಡಿಯಾ’ ಕೂಟದ ಏಕೈಕ ಗುರಿಯಾಗಿದೆ’ ಎಂದು ಟೀಕಿಸಿದರು.

ವಿದೇಶಾಂಗ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಪ್ರತಿಕ್ರಿಯಿಸಿ, ‘ಸನಾತನ ಧರ್ಮವು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತದೆ. ಈ ಬಗ್ಗೆ ವಿರೋಧ ಪಕ್ಷಗಳಿಗೆ ನಂಬಿಕೆ ಇಲ್ಲ. ಅವರಿಗೆ ಕುಟುಂಬ ರಾಜಕಾರಣದಲ್ಲಿ ಮಾತ್ರ ನಂಬಿಕೆ ಇದೆ’ ಎಂದರು.

‘ಜನರ ಆಕ್ರೋಶ ಎದುರಿಸಬೇಕಾಗುತ್ತದೆ’

ಇಂದೋರ್ (ಮಧ್ಯಪ್ರದೇಶ): ‘ಸನಾತನ ಧರ್ಮವೇ ಭಾರತದ ಬುನಾದಿ. ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳುವವರು ಜನರ ಆಕ್ರೋಶಕ್ಕೆ ಗುರಿಯಾಗುತ್ತಾರೆ’ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಶುಕ್ರವಾರ ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸನಾತನ ಧರ್ಮ ಕುರಿತು ತನ್ನ ಅಂಗಪಕ್ಷವೊಂದರ ನಾಯಕರ ಹೇಳಿಕೆಗಳ ಬಗ್ಗೆ ‘ಇಂಡಿಯಾ’ದ ಇತರ ಪಕ್ಷಗಳು ಮೌನ ವಹಿಸಿವೆ ಯಾಕೆ’ ಎಂದು ಪ್ರಶ್ನಿಸಿದರು.

ಸಿಬಿಐ ತನಿಖೆಗೆ ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್‌ಗೆ ವಕೀಲರ ಅರ್ಜಿ

ನವದೆಹಲಿ: ಸೆಪ್ಟೆಂಬರ್ 2 ರಂದು ನಡೆದ ‘ಸನಾತನ ಧರ್ಮ ನಿರ್ಮೂಲನಾ ಸಮಾವೇಶ’ದ ವಿರುದ್ದ ಸಿಬಿಐ ತನಿಖೆ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟ್ ವಕೀಲರೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಉದಯನಿಧಿ, ಪೀಟರ್ ಅಲ್ಫೋನ್ಸ್, ಎ.ರಾಜಾ, ಥೋಲ್ ತಿರುಮಾವಲವನ್ ಮತ್ತು ಅವರ ಅನುಯಾಯಿಗಳು ಸನಾತನ ಧರ್ಮ ಅಥವಾ ಹಿಂದೂ ಧರ್ಮದ ಕುರಿತು ಯಾವುದೇ ದ್ವೇಷ ಭಾಷಣ ಮಾಡದಂತೆ ಮಧ್ಯಂತರ ತಡೆಯಾಜ್ಞೆ ಕೋರಿ ಬಿ.ಜಗನ್ನಾಥ್ ಅರ್ಜಿ ಸಲ್ಲಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿ, ಎಲ್ಲರೂ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಅನುಸರಿಸಬೇಕು ಎಂದು ಹೇಳಿದೆ. ಉದಯನಿಧಿ ಮತ್ತು ಎ.ರಾಜಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ವಕೀಲ ವಿನೀತ್ ಜಿಂದಾಲ್ ಅವರು ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.

ಸನಾತನ ಧರ್ಮ ನಿರ್ಮೂಲನಾ ಸಮ್ಮೇಳನದಲ್ಲಿ ರಾಜ್ಯ ಸಚಿವರು ಭಾಗವಹಿಸುವುದು ಅಸಂವಿಧಾನಿಕ ಮತ್ತು ಸಂವಿಧಾನದ 25 ಮತ್ತು 26 ನೇ ವಿಧಿಗಳ ಉಲ್ಲಂಘನೆ ಎಂದು ಘೋಷಿಸುವಂತೆ ಜಗನ್ನಾಥ್ ತಮ್ಮ ಮನವಿಯಲ್ಲಿ ಕೋರಿದ್ದಾರೆ. ಕರ್ನಾಟಕದ ಹಿಜಾಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಎಲ್ಲಾ ಮಾಧ್ಯಮಿಕ ಶಾಲೆಗಳಲ್ಲಿ ಯಾವುದೇ ಹಿಂದೂ ಧರ್ಮದ ವಿರುದ್ಧ ಈ ಸಮ್ಮೇಳನಗಳು ನಡೆಯಬಾರದು ಎಂದು ತಮಿಳುನಾಡು ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT