ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಢ: ನಕ್ಸಲರಿಗೆ ಬೆಂಬಲ ಆರೋಪ, ಶಿಕ್ಷಕರ ಬಂಧನ

Published 7 ಜನವರಿ 2024, 13:29 IST
Last Updated 7 ಜನವರಿ 2024, 13:29 IST
ಅಕ್ಷರ ಗಾತ್ರ

ಮಾನ್‌ಪುರ: ಛತ್ತೀಸಗಢದ ಮೊಹ್ಲಾ–ಮಾಪನೂರ್‌–ಅಂಬಾಗಢ ಚೌಕಿ ಜಿಲ್ಲೆಯಲ್ಲಿ ನಕ್ಸಲರಿಗೆ ಬೆಂಬಲ ನೀಡುತ್ತಿದ್ದ ಆರೋಪದ ಮೇಲೆ ಶಿಕ್ಷಕರೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದರು.

ರಾಮ್‌ಲಾಲ್‌ ನುರೇಟಿ ಬಂಧಿತ ಶಿಕ್ಷಕ. ಇವರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಕ್ಸಲರ ಪರ ಬ್ಯಾನರ್‌ ಮತ್ತು ಫಲಕಗಳನ್ನು ಹಿಡಿದಿದ್ದರು ಎಂಬ ಆರೋಪ ಇದೆ ಎಂದು ತಿಳಿಸಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು, ರಾಮ್‌ಲಾಲ್‌ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಸೀತಾಗಾಂವ್ ಪೊಲೀಸ್‌ ಠಾಣೆ ಎದುರು ಧರಣಿ ಆರಂಭಿಸಿದ್ದಾರೆ.

ರಾಮ್‌ಲಾಲ್‌, ಕಾರೆಕಟ್ಟಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಸೆ.15ರಂದು ಪೊಲೀಸರು, ಮದನ್‌ವಾಡಾ ಪ್ರದೇಶದಲ್ಲಿದ್ದ ನಕ್ಸಲ್‌ ಪರ ಫಲಕಗಳು ಮತ್ತು ಬ್ಯಾನರ್‌ಗಳನ್ನು ವಶಕ್ಕೆ ಪಡೆದಿದ್ದರು.  ರಾಮ್‌ಲಾಲ್‌ ಅವರೂ ಫಲಕಗಳನ್ನು ಹಿಡಿದಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿತ್ತು. ಆಗಿನಿಂದಲೂ ಪೊಲೀಸರು ಅವರ ಮೇಲೆ ಕಣ್ಣಿಟ್ಟಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಬಿಡುಗಡೆ ಮಾಡುವವರೆಗೂ ಧರಣಿ ಮುಂದುವರಿಸುತ್ತೇವೆ. ತನಿಖೆ ನಡೆಸದೇ ಶಾಲೆಯಿಂದಲೇ ಅವರನ್ನು ಬಂಧಿಸಲಾಗಿದೆ. ಅವರು ಶಾಲಾ ಶಿಕ್ಷಕರು, ನಕ್ಸಲ್‌ ಅಲ್ಲ’ ಎಂದು ಪ್ರತಿಭಟನಕಾರರು ಹೇಳಿದ್ದಾರೆ. ಈ ಬೆನ್ನಲ್ಲೇ ಪೊಲೀಸ್‌ ಠಾಣೆ ಬಳಿ ಹೆಚ್ಚಿನ ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT