ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು | ‘ದಿ ಕೇರಳ ಸ್ಟೋರಿ‘ ಸಿನಿಮಾ ವಿಚಾರವಾಗಿ ಜಗಳ; 10 ವೈದ್ಯ ವಿದ್ಯಾರ್ಥಿಗಳ ಅಮಾನತು

Published 16 ಮೇ 2023, 13:04 IST
Last Updated 16 ಮೇ 2023, 13:04 IST
ಅಕ್ಷರ ಗಾತ್ರ

ಜಮ್ಮು : ‘ದಿ ಕೇರಳ ಸ್ಟೋರಿ‘ ಸಿನಿಮಾದ ವಿಚಾರವಾಗಿ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿನ (ಜಿಎಂಸಿ) ವಸತಿನಿಲಯದ ವಿದ್ಯಾರ್ಥಿಗಳ ನಡುವೆ ಜಗಳವಾಗಿದ್ದು, ಈ ಸಂಬಂಧ 10 ವಿದ್ಯಾರ್ಥಿಗಳನ್ನು 2 ತಿಂಗಳ ಕಾಲ ಅಮಾನತು ಮಾಡಲಾಗಿದೆ ಎಂದು ಕಾಲೇಜು ಪ್ರಾಂಶುಪಾಲೆ ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಲೇಜಿನ ಪ್ರಾಂಶುಪಾಲೆಯಾದ ಶಶಿ ಸುಧನ್ ಸುಂದರ್‌, ‘ಸಿನಿಮಾ ವಿಚಾರವಾಗಿ ಭಾನುವಾರ ಸಂಜೆ ವಿದ್ಯಾರ್ಥಿಗಳ ವಸತಿನಿಲಯದಲ್ಲಿ(Boys Hostel) ಜಗಳ ನಡೆದಿದೆ. ಜಗಳದಲ್ಲಿ ಐವರಿಗೆ ಗಾಯಗಳಾಗಿವೆ. ವಾರ್ಡನ್‌ ಅವರ ಮಾಹಿತಿ ಪ್ರಕಾರ ಜಗಳದಲ್ಲಿ ಭಾಗಿಯಾದ 10 ವಿದ್ಯಾರ್ಥಿಗಳನ್ನು ವಸತಿನಿಲಯದಿಂದ ಅಮಾನತು ಮಾಡಲಾಗಿದೆ‘ ಎಂದರು.

‘ವಾರ್ಡನ್‌ ನೀಡಿದ ವರದಿಯನ್ನು ಕಾಲೇಜಿನ ಶಿಸ್ತು ಸಮಿತಿಗೆ ವರ್ಗಾಯಿಸಲಾಗಿದೆ. ಇನ್ನು ಏಳು ದಿನಗಳಲ್ಲಿ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ತರಗತಿಗೆ ಹಾಜರಾಗದಂತೆಯು ತಿಳಿಸಲಾಗಿದೆ‘ ಎಂದು ತಿಳಿಸಿದರು.

‘ಕಾಲೇಜು ಆವರಣದಲ್ಲಿ ಮುಂಜಾಗ್ರತ ಕ್ರಮ ತೆಗೆದುಕೊಳ್ಳುವಂತೆ ಹಾಗೂ ಹೆಚ್ಚುವರಿ ಸಿಬ್ಬಂದಿಗಳನ್ನು ವಸತಿನಿಲಯದ ಆವರಣದಲ್ಲಿ ನಿಯೋಜಿಸುವಂತೆ. ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ‘ ಎಂದರು.

‘ಜಗಳದಲ್ಲಿ ಜಿಎಂಸಿ ಕಾಲೇಜಿನ ಮಾಜಿ ವಿದ್ಯಾರ್ಥಿಯೊಬ್ಬ ಭಾಗಿಯಾಗಿದ್ದು, ಆತನ ಮೇಲೆ ಬಕ್ಷಿನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಎಸ್‌ಎಚ್‌ಒ ಅವರು ತಿಳಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿದೆ. ಜಗಳದಲ್ಲಿ ಗಾಯಗೊಂಡವರನ್ನು ಆಸ್ಟತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಾಲೇಜಿನ ಸುತ್ತಮುತ್ತ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲಾಗಿದೆ‘ ಎಂದರು.

‘ಮುಂಜಾಗ್ರತ ಕ್ರಮವಾಗಿ ಒಬ್ಬ ಸೆಕ್ಯುರಿಟಿ ಸೂಪರ್‌ವೈಸರ್‌ ಜೊತೆಗೆ ಎಂಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT