ನವದೆಹಲಿ: ಫ್ರಾನ್ಸ್‌ನಿಂದ ಎರಡನೇ ಹಂತದ ರಫೇಲ್ ಯುದ್ಧ ವಿಮಾನಗಳು ಬುಧವಾರ ರಾತ್ರಿ 8:14ಕ್ಕೆ ಭಾರತಕ್ಕೆ ಬಂದಿಳಿದಿವೆ. ಮೂರು ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್‌ನಿಂದ ತಡೆ ರಹಿತ ಹಾರಾಟದೊಂದಿಗೆ ಭಾರತ ಪ್ರವೇಶಿಸಿರುವುದಾಗಿ ಭಾರತೀಯ ವಾಯುಪಡೆ ಹೇಳಿದೆ.

ಫ್ರಾನ್ಸ್‌ನಿಂದ ಹಾರಾಟ ಆರಂಭಿಸಿದ ಮೂರು ರಫೇಲ್ ಯುದ್ಧ ವಿಮಾನಗಳಿಗೆ ಮಾರ್ಗ ಮಧ್ಯೆ ಮೂರು ಬಾರಿ ಇಂಧನ ಭರ್ತಿ ಮಾಡಲಾಗಿದೆ. 8 ಗಂಟೆ ನಿರಂತರ ಹಾರಾಟ ನಡೆಸಿರುವ ರಫೇಲ್, ದೂರ ವ್ಯಾಪ್ತಿಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಗುಜರಾತ್‌ನ ಜಾಮ್‌ನಗರ್ ವಾಯುನೆಲೆಗೆ ಮೂರು ರಫೇಲ್‌ಗಳು ಬಂದಿಳಿಯುವ ಮೂಲಕ ದೇಶದ ವಾಯುಪಡೆಗೆ ಒಟ್ಟು 8 ರಫೇಲ್‌ಗಳ ಸೇರ್ಪಡೆಯಾದಂತಾಗಿದೆ. ಜುಲೈ 29ರಂದು ಮೊದಲ ಹಂತದಲ್ಲಿ ಐದು ರಫೇಲ್‌ಗಳು ಭಾರತ ತಲುಪಿದ್ದವು. ₹59,000 ಕೋಟಿ ವೆಚ್ಚದಲ್ಲಿ 36 ರಫೇಲ್‌ಗಳನ್ನು ಸಿದ್ಧಪಡಿಸಿಕೊಡುವಂತೆ ಫ್ರಾನ್ಸ್ ಸರ್ಕಾರದೊಂದಿಗೆ ಭಾರತ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಒಪ್ಪಂದ ಮಾಡಿಕೊಂಡಿದೆ.

ಸೆಪ್ಟೆಂಬರ್ 10ರಂದು ಮೊದಲ ಹಂತದ ರಫೇಲ್ ಯುದ್ಧ ವಿಮಾನಗಳು ವಾಯುಪಡೆಗೆ ಸೇರ್ಪಡೆಯಾಗಿವೆ. 2023ರ ವೇಳೆ ಎಲ್ಲ 36 ರಫೇಲ್ ಯುದ್ಧ ವಿಮಾನಗಳು ವಾಯುಪಡೆಗೆ ನಿಯೋಜನೆಗೊಳ್ಳಲಿವೆ ಎಂದು ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್.ಭದೌರಿಯಾ ಅಕ್ಟೋಬರ್ 5ರಂದು ಹೇಳಿದ್ದರು.

ಗುರಿಯ ಮೇಲೆ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯವನ್ನು ರಫೇಲ್ ಹೊಂದಿದೆ. ರಷ್ಯಾದಿಂದ ಸುಖೋಯ್ ಯುದ್ಧ ವಿಮಾನಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ, ಯುದ್ಧ ವಿಮಾನಗಳ ನಿಯೋಜನೆಯಲ್ಲಿ 23 ವರ್ಷಗಳಲ್ಲೇ ಅತಿ ದೊಡ್ಡ ಒಪ್ಪಂದ ಪ್ರಕ್ರಿಯೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.