ಹಿಸಾರ್/ಹರಿಯಾಣ:ಹರಿಯಾಣದ ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್ ಹಾಗೂ 14 ಮಂದಿ ಬೆಂಬಲಗರಿಗೆ ಹರಿಯಾಣದ ಸೆಷನ್ಸ್ ನ್ಯಾಯಾಲಯ ಮಂಗಳವಾರಜೀವಾವಧಿ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿದೆ.

ಎರಡು ಅಪರಾಧ ಪ್ರಕರಣಗಳಲ್ಲಿ ರಾಮ್‌ಪಾಲ್ ಅವರನ್ನು ಅ.11 ರಂದು ದೋಷಿ ಎಂದು ಹೈಕೋರ್ಟ್ ಘೋಷಿಸಿತ್ತು. ಇವರನ್ನು 2014ರ ನವೆಂಬರ್‌ನಲ್ಲಿ ಬಂಧಿಸಲಾಗಿತ್ತು.

ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್‌ಪಾಲ್ ಮತ್ತು ಅವರ 27 ಮಂದಿ ಅನುಯಾಯಿಗಳಿಗೆ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಡಿ.ಆರ್. ಚಾಲಿಯಾ ಬುಧವಾರ ಶಿಕ್ಷೆ ಪ್ರಕಟಿಸಲಿದ್ದಾರೆ.ರಾಮ್‌ಪಾಲ್ ಮತ್ತು ಅವರ ಅನುಯಾಯಿಗಳ ಮೇಲೆ 2014ರ ನವೆಂಬರ್ 19ರಂದು ಬರ್ವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದೆಹಲಿಯ ಬದ್ರಾಪುರ ಸಮೀಪದ ಮಿತಾಪುರದ ಶಿವಪಾಲ್ ಮತ್ತು ಉತ್ತರಪ್ರದೇಶದ ಲಲಿತ್‌ಪುರ ಜಿಲ್ಲೆಯ ಜಾಖೋರ ಜಿಲ್ಲೆಯ ಸುರೇಶ್ ಎಂಬುವವರು ತಮ್ಮ ಪತ್ನಿಯರನ್ನು ಬರ್ವಾಲದಲ್ಲಿರುವ ರಾಮ್‌ಪಾಲ್ ಅವರ ಸತ್‌ಲೋಕ್ ಆಶ್ರಮದಲ್ಲಿ ಬಂಧನದಲ್ಲಿಟ್ಟು, ರಾಮ್‌ಪಾಲ್ ಮತ್ತು ಅವರ ಅನುಯಾಯಿಗಳು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ, ಪ್ರಕರಣ ದಾಖಲಿಸಿದ್ದರು.

ಪ್ರಕರಣ ಏನು?

2014ರ ನವೆಂಬರ್ 18ರಂದು ಹಿಸ್ಸಾರ್‌ನ ಬರ್ವಾಲ ಪಟ್ಟಣದ ಸತ್‌ಲೋಕ್ ಆಶ್ರಮದಲ್ಲಿ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣದಲ್ಲಿ ರಾಮ್‌ಪಾಲ್ ಬಂಧಿಸಲು ಪೊಲೀಸರು 2014ರ ನವೆಂಬರ್ 19ರಂದು ಆಶ್ರಮಕ್ಕೆ ತೆರಳಿದ್ದರು. ಆಗ ಆಶ್ರಮದಲ್ಲಿ ಉಂಟಾದ ಗಲಭೆಯಲ್ಲಿ ನಾಲ್ವರು ಮಹಿಳೆಯರು ಮತ್ತು ಒಂದು ಮಗು ಸಾವಿಗೀಡಾಗಿತ್ತು. ಈ ಎರಡೂ ಪ್ರಕರಣಗಳ ಸಂಬಂಧ ರಾಮ್‌ಪಾಲ್ ವಿರುದ್ಧ ಕೊಲೆ, ಕೊಲೆಗೆ ಯತ್ನ, ಪಿತೂರಿ, ಶಸ್ತ್ರಾಸ್ತ್ರ ಅಕ್ರಮ ಸಂಗ್ರಹ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದ್ದವು.

ನಾಲ್ಕು ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆದು, ಮೊದಲ ತೀರ್ಪು ಹೊರಬಿದ್ದಿದೆ. ಕೋರ್ಟ್ ತೀರ್ಪಿನಿಂದ ಗಲಭೆ ಉಂಟಾಗಬಹುದೆಂದು ಪೊಲೀಸರು ಹಿಸ್ಸಾರ್‌ನ ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ಇವನ್ನೂ ಓದಿ...

ರಾಮ್‌ಪಾಲ್ ಬಂಧನ
ರಾಮ್‌ಪಾಲ್ ಜಾಮೀನು ರದ್ದು
ರಾಮ್‌ಪಾಲ್ ಬಂಧನಕ್ಕೆ 26ಕೋಟಿ ಖರ್ಚು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.