ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 | ಕೋವಿಶೀಲ್ಡ್ ಬೂಸ್ಟರ್‌ ಡೋಸ್‌ಗೆ ₹ 600

Last Updated 8 ಏಪ್ರಿಲ್ 2022, 16:19 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ನಿಯಂತ್ರಣಕ್ಕಾಗಿ ಪಡೆಯುವ ಮುಂಜಾಗ್ರತೆ ಡೋಸ್‌ ಕೋವಿಶೀಲ್ಡ್‌ ಲಸಿಕೆಗೆ ₹ 600 ನಿಗದಿ ಮಾಡಿರುವುದಾಗಿ 'ಸೀರಂ ಇನ್ಸಿಟ್ಯೂಟ್ ಆಫ್ ಇಂಡಿಯಾ' (ಎಸ್‌ಐಐ) ಶುಕ್ರವಾರ ಪ್ರಕಟಿಸಿದೆ.

'ಅರ್ಹರು₹ 600ಕ್ಕೆಬೂಸ್ಟರ್‌ ಡೋಸ್‌ ಲಸಿಕೆ ಪಡೆಯಬಹುದಾಗಿದೆ. ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ಲಸಿಕೆ ಪೂರೈಸಲಾಗುವುದು' ಎಂದುಎಸ್‌ಐಐ ಸಿಇಒ ಆದಾರ್‌ ಪೂನಾವಲಾ ಪ್ರಕಟಿಸಿದ್ದಾರೆ.

ಕೇಂದ್ರ ಸರ್ಕಾರವು, ಎರಡನೇ ಡೋಸ್‌ ಲಸಿಕೆ ಪಡೆದು 9 ತಿಂಗಳು ಪೂರೈಸಿರುವ 18 ವರ್ಷ ಮೇಲ್ಪಟ್ಟ ಎಲ್ಲರೂ ಮುಂಜಾಗ್ರತಾ ಡೋಸ್‌ ಪಡೆಯಬಹುದು ಎಂದು ಶುಕ್ರವಾರ ಪ್ರಕಟಿಸಿದೆ. ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ಪೂನಾವಾಲಾ, ಈ ನಿರ್ಧಾರದಿಂದ ದೀರ್ಘಕಾಲದವರೆಗೆ ವೈರಸ್‌ನಿಂದ ರಕ್ಷಣೆ ದೊರೆಯಲಿದ್ದು, ಸೋಂಕು ಹರಡುವಿಕೆಗೆ ಕಡಿವಾಣ ಬೀಳಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT