ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕಳೆದ 10 ವರ್ಷಗಳಲ್ಲಿ 17 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ಆದರೆ ಈ ಹಿಂದೆ ದಶಕಗಳ ಕಾಲ ಆಡಳಿತದಲ್ಲಿದ್ದ ಯುಪಿಎ ಸರ್ಕಾರದ ಅವಧಿಯಲ್ಲಿ ಕೇವಲ 3 ಕೋಟಿ ಉದ್ಯೋಗ ಸೃಷ್ಟಿಯಾಗಿತ್ತು’ ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮನಸುಖ್ ಮಾಂಡವಿಯಾ ಲೋಕಸಭೆಗೆ ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಕಳೆದ 10 ವರ್ಷಗಳಲ್ಲಿ 10 ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿಸಿರುವುದು ದಾಖಲೆಯಾಗಿದೆ. ಹತ್ತು ವರ್ಷಗಳ ಯುಪಿಎ ಆಡಳಿತದಲ್ಲಿ ಕೇವಲ 3 ಕೋಟಿ ಉದ್ಯೋಗ ಮಾತ್ರ ಸೃಷ್ಟಿಯಾಗಿತ್ತು. ಇದನ್ನು ನಾವಾಗಿಯೇ ಹೇಳುತ್ತಿಲ್ಲ, ಆರ್ಬಿಐ ನೀಡಿದ ಅಂಕಿಅಂಶಗಳಲ್ಲಿ ಈ ಮಾಹಿತಿ ಇದೆ. ಸ್ವಾತಂತ್ರ್ಯಾ ನಂತರ ಪ್ರತೀ ವರ್ಷ ಉದ್ಯೋಗ ಸೃಷ್ಟಿಯಾದ ಬಗ್ಗೆ ಆರ್ಬಿಐ ಮಾಹಿತಿಯನ್ನು ಬಿಡುಗಡೆ ಮಾಡುತ್ತದೆ. ಕಳೆದ 16 ತಿಂಗಳಲ್ಲಿ ಕೇಂದ್ರವು 11 ಲಕ್ಷ ಯುವಜನತೆಗೆ ಕೆಲಸ ಸಿಗುವಂತೆ ಮಾಡಿದೆ’ ಎಂದರು.

‘ಮೋದಿಯವರು ಕೇವಲ ಉದ್ಯೋಗವನ್ನು ಸೃಷ್ಟಿಸಿಲ್ಲ, ಬದಲಾಗಿ ಮುಂದಿನ 5 ವರ್ಷಗಳ ಉದ್ಯೋಗ ಸೃಷ್ಟಿಗೆ ಬೇಕಾದ ಯೋಜನೆಯನ್ನೂ ರೂಪಿಸಿದ್ದಾರೆ. ‘ಮೋದಿ 3.0’ ಆರಂಭದಲ್ಲೇ ವಿಕಸಿತ್ ಭಾರತ್ ರೋಜಗಾರ್ ಯೋಜನೆಯನ್ನು ಘೋಷಿಸಿದ್ದಾರೆ. ಇದರ ಅಡಿಯಲ್ಲಿ ₹2ಲಕ್ಷ ಕೋಟಿ ವೆಚ್ಚದಲ್ಲಿ 4 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಇದೆ. ಈ ಯೋಜನೆಯಿಂದ ಉತ್ತಮ ಫಲಿತಾಂಶವನ್ನು ಪಡೆಯುತ್ತಿದ್ದೇವೆ‘ ಎಂದು ವಿವರಿಸಿದರು.

ಪಿಎಂ ವಿಕಸಿತ್ ಭಾರತ ರೋಜಗಾರ್ ಯೋಜನೆಯು ಈ ವರ್ಷದ ಆ.1ರಿಂದ ಆರಂಭವಾಗಿದೆ. ಈ ಯೋಜನೆಯ ಪ್ರಯೋಜನಗಳು 2025ರ ಆಗಸ್ಟ್ 1 ರಿಂದ 2027 ಜುಲೈ 31 ರ ನಡುವೆ ಸೃಷ್ಟಿಯಾದ ಉದ್ಯೋಗಗಳಿಗೆ ಅನ್ವಯಿಸುತ್ತವೆ.
.ನರ್ಸಿಂಗ್ ಪದವೀಧರರಿಗೆ ವಿದೇಶಿ ಉದ್ಯೋಗ .ಸ್ವದೇಶಿ ವಸ್ತು ಬಳಕೆಯೇ ನೈಜ ದೇಶ ಸೇವೆ: ಪ್ರಧಾನಿ ಮೋದಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.