ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾರತ ಮಾತೆ ಗೌರವಕ್ಕೆ ದ್ರೋಹ ಬಗೆದಿದ್ದಾರೆ ಎಂದು ಘೋಷಿಸೋಣವೇ? ಎಂಬುದಾಗಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯು(ಪಿಎಲ್‌ಎ) 60 ಕಿ.ಮೀ.ನಷ್ಟು ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸಿ, ಬೀಡುಬಿಟ್ಟಿದೆ ಎಂಬ ಲೇಖನ ಒಂದನ್ನು ಉಲ್ಲೇಖಿಸಿ, ಮೋದಿಯು ಭಾರತ ಮಾತೆಯ ಗೌರವಕ್ಕೆ ದ್ರೋಹ ಬಗೆದಿದ್ದಾರೆ ಎಂದು ನಾವು ಘೋಷಿಸೋಣವೇ? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ, ಚೀನಾ ಜೊತೆಗಿನ ರಾಯಭಾರಿ ಮಟ್ಟದ ಸಂಬಂಧವನ್ನು ಕಡಿದುಕೊಳ್ಳಲು ನಾನು ಒತ್ತಾಯಿಸುತ್ತೇನೆ ಎಂದಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ರಾಜ್ಯಸಭೆಯ ಮಾಜಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟೀಕೆಗೈದಿರುವುದು ಇದೇ ಮೊದಲಲ್ಲ. ಕಳೆದ ತಿಂಗಳೂ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ವಿದೇಶಿ ನೀತಿಯನ್ನು ಪ್ರಶ್ನಿಸಿದ್ದರು.

'ಮಾಲ್ದಿವ್ಸ್ ಸಿಂಡ್ರೋಮ್' ಬಾಂಗ್ಲಾದೇಶದಲ್ಲಿ ಮೌನವಾಗಿ ಹರಡುವುದು ಮುಂದುವರಿದಿದೆ ಮತ್ತು ಮೋದಿಯವರ ಪರಂಪರೆಯು ಭಾರತದ ವಿಘಟನೆಗಾಗಿ ಕೆಲಸ ಮಾಡುವ ನೆರೆಹೊರೆಯವರ್ನು ಸೃಷ್ಟಿಸುತ್ತದೆ’ ಎಂಬ ತಲೆಬರಹವಿರುವ BLiTZನ ಲೇಖನವನ್ನು .ಸ್ವಾಮಿ ಹಂಚಿಕೊಂಡಿದ್ದರು.

‘ಮುಂಬರುವ 25 ವರ್ಷಗಳ 'ಅದ್ಭುತ' ಮೋದಿ ಪರಂಪರೆ: ಭಾರತವನ್ನು ಸುತ್ತುವರೆದಿರುವ ನೆರೆಹೊರೆಯವರು ನಮ್ಮ ವಿಘಟನೆಗಾಗಿ ಕೆಲಸ ಮಾಡುತ್ತಾರೆ’ ಎಂದು ಅವರು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.