ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಯನ್ನು ಕೊಂದು, ಹಲ್ಲನ್ನು ಕುತ್ತಿಗೆಗೆ ಹಾಕಿಕೊಂಡೆ: ಶಿವಸೇನಾ ಶಿಂದೆ ಬಣದ ಶಾಸಕ

Published 22 ಫೆಬ್ರುವರಿ 2024, 11:03 IST
Last Updated 22 ಫೆಬ್ರುವರಿ 2024, 11:03 IST
ಅಕ್ಷರ ಗಾತ್ರ

ಮುಂಬೈ: 37 ವರ್ಷಗಳ ಹಿಂದೆ ಹುಲಿಯನ್ನು ಭೇಟೆಯಾಡಿ, ಅದರ ಹಲ್ಲುಗಳನ್ನು ಕುತ್ತಿಗೆಗೆ ಹಾಕಿಕೊಂಡಿರುವೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ ಬಣದ ಶಿವಸೇನಾ ಶಾಸಕ ಸಂಜಯ್ ಗಾಯಕವಾಡ್ ಬಡಾಯಿ ಕೊಚ್ಚಿಕೊಂಡಿದ್ದಾರೆ.

ಮಹಾರಾಷ್ಟ್ರದ ವಿದರ್ಭ ಭಾಗದ ಬುಲ್ಢಾನಾ ಕ್ಷೇತ್ರದ ಶಾಸಕ ಸಂಜಯ್ ಗಾಯಕವಾಡ್ ಹೇಳಿಕೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಕುತ್ತಿಗೆಯಲ್ಲಿ ಹುಲಿ ಹಲ್ಲಿರುವ ಬಗ್ಗೆ ಶಾಸಕರನ್ನು ಪ್ರಶ್ನಿಸುತ್ತಾರೆ. ಅದಕ್ಕುತ್ತರಿಸಿದ ಅವರು, ‘ಇದು ಹುಲಿ ಹಲ್ಲು. 1987ರಲ್ಲಿ ಹುಲಿಯನ್ನು ಕೊಂದು ಅದರ ಹಲ್ಲನ್ನು ಕುತ್ತಿಗೆಗೆ ಹಾಕಿಕೊಂಡೆ’ಎಂದು ಹೇಳಿದ್ದಾರೆ.

ಸೋಮವಾರ, ಛತ್ರಪತಿ ಶಿವಾಜಿ ಜನ್ಮ ಜಯಂತಿ ಕಾರ್ಯಕ್ರಮದ ಸಂದರ್ಭ ವಿಡಿಯೊ ಚಿತ್ರೀಕರಣವಾಗಿರುವ ಸಾಧ್ಯತೆ ಇದ್ದು, ಶಿವಸೇನಾ(ಯುಬಿಟಿ) ಮುಖವಾಣಿ ಸಾಮ್ನಾದ ಸಾಮಾಜಿಕ ಮಾಧ್ಯಮ ಖಾತೆಯಲ್ಲೂ ಪೋಸ್ಟ್ ಮಾಡಲಾಗಿದೆ.

ಹುಲಿ ಬೇಟೆಯು ಕ್ರಿಮಿನಲ್ ಅಪರಾಧವೆಂಬ ಕಾನೂನು 1987ಕ್ಕಿಂತ ಮೊದಲಿನಿಂದಲೂ ದೇಶದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT