ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಗಡ ಕೋಟೆಯಲ್ಲಿ ಶಿವಾಜಿ ಕಾಲದ ಚಿನ್ನದ ಬಳೆ ಪತ್ತೆ

ಮಹಾರಾಷ್ಟ್ರ: ಉತ್ಖನನ ವೇಳೆಯಲ್ಲಿ ದೊರೆತ ಬಳೆ
Last Updated 3 ಏಪ್ರಿಲ್ 2021, 10:55 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ರಾಯಗಡ ಕೋಟೆಯ ಉತ್ಖನನದ ವೇಳೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಅವರ ಕಾಲದ್ದು ಎನ್ನಲಾದ ಚಿನ್ನದ ಬಳೆಯೊಂದು ಪತ್ತೆಯಾಗಿದೆ.

ಮುಂಬೈನಿಂದ 160 ಕಿ.ಮೀ. ದೂರವಿರುವ ಮಹಾಡ್‌ನಲ್ಲಿರುವ ಬೆಟ್ಟದ ಮೇಲಿರುವ ಕೋಟೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಮತ್ತು ರಾಯಗಡ ಅಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಸಹಯೋಗದಲ್ಲಿ ಉತ್ಖನನ ಕೈಗೊಳ್ಳಲಾಗಿದೆ.

ಚಿನ್ನದ ಬಳೆ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾದ ಶ್ರೀ ಸಂಭಾಜಿರಾಜೇ ಛತ್ರಪತಿ ಅವರು ರಾಯಗಡ ಕೋಟೆಗೆ ಭೇಟಿ ನೀಡಿ, ಚಿನ್ನದ ಬಳೆಯನ್ನು ಪರಿಶೀಲಿಸಿದರು.

‘ಇದು ಶಿವಾಜಿ ಮಹಾರಾಜರ ಸಮಕಾಲೀನ ಜೀವನಶೈಲಿ, ಸಂಸ್ಕೃತಿ ಮತ್ತು ವಾಸ್ತುಶಿಲ್ಪವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ರಾಯಗಡದ ಉತ್ಖನನ ಮತ್ತು ಸಂರಕ್ಷಣಾ ಕಾರ್ಯಗಳನ್ನು ಕೈಗೊಂಡ ಎಎಸ್ಐನ ಪ್ರಯತ್ನ ಶ್ಲಾಘನೀಯ’ ಎಂದು ಕೊಲ್ಹಾಪುರದ ರಾಜಮನೆತನದವರೂ ಹಾಗೂ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರೂ ಆಗಿರುವ ಸಂಭಾಜಿರಾಜೇ ಅವರು ಹೇಳಿದರು.

‘ಈಗ ಚಿನ್ನದ ಬಳೆ ಪತ್ತೆಯಾಗಿದೆ.ಈ ಹಿಂದೆ ಉತ್ಖನನ ವೇಳೆಯಲ್ಲಿ ಅನೇಕ ಆಭರಣಗಳು, ಪಾತ್ರೆಗಳು, ನಾಣ್ಯಗಳು ಸೇರಿದಂತೆ ಹಲವು ವಸ್ತುಗಳು ದೊರೆತಿದ್ದವು. ಮುಂದಿನ ದಿನಗಳಲ್ಲಿ ಮತ್ತಷ್ಟು ಅಮೂಲ್ಯ ವಸ್ತುಗಳು ಉತ್ಖನನ ವೇಳೆಯಲ್ಲಿ ದೊರೆಯುವ ಸಾಧ್ಯತೆ ಇದೆ’ ಎಂದು ಆರ್‌ಡಿಎ ಅಧ್ಯಕ್ಷರೂ ಆಗಿರುವ ಸಂಭಾಜಿ ಅವರು ಹೇಳಿದರು.

1674ರಲ್ಲಿ ಶಿವಾಜಿ ಮಹಾರಾಜ ರಾಯಗಡ ಕೋಟೆಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT