ಫ್ರೀಟೌನ್, ಸಿಯಾರಾ ಲಿಯೊನ್: ‘ಭಯೋತ್ಪಾದನೆಯನ್ನು ಮಟ್ಟಹಾಕುವ ಭಾರತದ ಹೋರಾಟಕ್ಕೆ ಬಲವಾದ ಬೆಂಬಲ ನೀಡಲಾಗುತ್ತದೆ. ಈ ವಿಚಾರದಲ್ಲಿ ಆಫ್ರಿಕಾ ರಾಷ್ಟ್ರಗಳು ಏಕತೆ ಪ್ರದರ್ಶಿಸಬೇಕಿದ್ದು, ಯಾವುದೇ ಕ್ರಮ ಕೈಗೊಳ್ಳದಿದ್ದರೆ ದೇಶಕ್ಕೆ ಅಪಾಯ ತಂದೊಡ್ಡಬಹುದು’ ಎಂದು ಸಿಯಾರಾ ಲಿಯೋನ್ನ ರಕ್ಷಣಾ ಖಾತೆ ಸಹಾಯಕ ಸಚಿವ ಮುವಾನಾ ಬ್ರಿಮಾ ತಿಳಿಸಿದ್ದಾರೆ.

ಪಹಲ್ಗಾಮ್ ದಾಳಿ ಬಳಿಕ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬೆಂಬಲ ಪಡೆಯುವ ನಿಟ್ಟಿನಲ್ಲಿ ಮೇ 28ರಿಂದ 30ರವರೆಗೆ ಶಿವಸೇನಾ ಸಂಸದ ಶ್ರೀಕಾಂತ್ ಏಕನಾಥ ಶಿಂದೆ ನೇತೃತ್ವದ ಸರ್ವಪಕ್ಷಗಳ ನಿಯೋಗವು ಇಲ್ಲಿಗೆ ಭೇಟಿ ನೀಡಿದ ಚರ್ಚಿಸಿದ ವೇಳೆ ಈ ವಿಷಯ ಪ್ರಸ್ತಾಪಿಸಿದ್ದಾರೆ.

ಭಯೋತ್ಪಾದನೆಯಿಂದ ಎದುರಾಗಿರುವ ಅಪಾಯಗಳ ಕುರಿತು ಜಾಗೃತಿ ಹಾಗೂ ಅಂತರರಾಷ್ಟ್ರೀಯ ಬೆಂಬಲ ವ್ಯಕ್ತಪಡಿಸುವ ನಿಟ್ಟಿನಲ್ಲಿ ನಿಯೋಗವು ಭೇಟಿ ನೀಡಿದೆ.

‘ಭಯೋತ್ಪಾದನೆ ವಿಚಾರದಲ್ಲಿ ಭಾರತವು ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದು, ಈ ವಿಚಾರದಲ್ಲಿ ಜಾಗತಿಕವಾಗಿ ಏಕತೆ ಪ್ರದರ್ಶಿಬೇಕಾದ ಅಗತ್ಯವಿದೆ ಎಂದು ಸಿಯಾರಾ ಲಿಯೋನ್ತಿಳಿಸಿದೆ’ ಎಂದು ಫ್ರೀಟೌನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಇಲ್ಲಿನ ಸಂಸತ್ನ ಸ್ಪೀಕರ್, ಸಂಸತ್ ಸದಸ್ಯರು, ವಿದೇಶಾಂಗ ಸಚಿವರು, ಭದ್ರತಾ ಸಲಹೆಗಾರರು ಹಾಗೂ ಉಪಾಧ್ಯಕ್ಷರ ಜೊತೆಗೆ ನಿಯೋಗವು ಮಾತುಕತೆ ನಡೆಸಿತು. ಈ ವೇಳೆಮ ಪಹಲ್ಗಾಮ್ ದಾಳಿಯನ್ನು ಬಲವಾಗಿ ಖಂಡಿಸಿದ ಸಿಯಾರಾ ಲಿಯೊನ್, ದಾಳಿಯಲ್ಲಿ ಮಡಿದ ಸಂತ್ರಸ್ತರ ಪರ ಸಂತಾಪ ಸಲ್ಲಿಸಿದೆ ಎಂದು ತಿಳಿಸಿದೆ.

ಲಾಟ್ವಿಯಾ ಬೆಂಬಲ: ‘ಎಲ್ಲ ಮಾದರಿಯ ಭಯೋತ್ಪಾದನೆಯನ್ನು ನಿಸ್ಸಂದಿಗ್ದವಾಗಿ ದೇಶವು ವಿರೋಧಿಸಲಿದ್ದು, ಹಿಂದೂ ಮಹಾಸಾಗರ– ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಹಾಗೂ ಸ್ಥಿರತೆಗೆ ಭಾರತವು ಪ್ರಮುಖ ಪಾತ್ರ ವಹಿಸಲಿದೆ’ ಎಂದು ಲಾಟ್ವಿಯಾ ವಿದೇಶಾಂಗ ಕಾರ್ಯದರ್ಶಿ ಎಂದ್ಜೆಸಿಸ್ ವಿಲಮ್ಸನ್ಸ್ ತಿಳಿಸಿದ್ದಾರೆ.

ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿ ನೇತೃತ್ವದ ತಂಡವು ಇಲ್ಲಿನ ರಿಗಾ ಪಟ್ಟಣಕ್ಕೆ ಭೇಟಿ ನೀಡಿ, ಚರ್ಚಿಸಿದ ವೇಳೆ ಈ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.