ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಗರ: ಉಗ್ರರಿಂದ ಪಂಜಾಬ್‌ ಮೂಲದ ಕಾರ್ಮಿಕನ ಹತ್ಯೆ

Published 7 ಫೆಬ್ರುವರಿ 2024, 16:02 IST
Last Updated 7 ಫೆಬ್ರುವರಿ 2024, 16:02 IST
ಅಕ್ಷರ ಗಾತ್ರ

ಶ್ರೀನಗರ: ನಗರದ ಹಬ್ಬಾ ಕದಲ್‌ ಪ್ರದೇಶದಲ್ಲಿ ಉಗ್ರರು ಬುಧವಾರ ನಡೆಸಿದ ದಾಳಿಯಲ್ಲಿ ಪಂಜಾಬ್‌ ಮೂಲದ ಕಾರ್ಮಿಕ ಹತನಾಗಿದ್ದು, ಮತ್ತೊಬ್ಬ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಮೃತಸರ ನಿವಾಸಿ ಅಮ್ರಿತ್‌ ಪಾಲ್‌ ಸಿಂಗ್‌ ಹತ್ಯೆಯಾದ ಕಾರ್ಮಿಕ. ರೋಹಿತ್‌ ಎಂಬ ಕಾರ್ಮಿಕ ಗಾಯಗೊಂಡಿದ್ದು, ಎಸ್‌ಎಂಎಚ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

‘ಸ್ಥಳೀಯರಲ್ಲದವರನ್ನು ಗುರಿಯಾಗಿಸಿ ಉಗ್ರರು ದಾಳಿ ಮಾಡಿ ನಡೆಸಿದ ಈ ವರ್ಷದ ಮೊದಲ ಹತ್ಯೆ ಇದಾಗಿದೆ. ಗುಂಡಿನ ದಾಳಿಯಿಂದಾಗಿ ಅಮ್ರಿತ್‌ ಪಾಲ್‌ ಸಿಂಗ್ ಸ್ಥಳದಲ್ಲಿಯೇ ಮೃತಪಟ್ಟ’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT