ಕೋಪದಿಂದ ಹೊರ ನಡೆದ ಮಮತಾ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಭೇಟಿಯಾಗಿದ್ದ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗದ (ಇಸಿ) ಪ್ರತಿಕ್ರಿಯೆಯನ್ನೂ ಕೇಳಿಸಿಕೊಳ್ಳದೇ ಅಸಮಾಧಾನಗೊಂಡ ಸಭೆಯಿಂದ ಹೊರ ನಡೆದಿದ್ದಾರೆ ಎಂದು ಇ.ಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಲದೇ, ಮಮತಾ ಹಾಗೂ ಅಭಿಷೇಕ್ ಬ್ಯಾನರ್ಜಿ ಅವರು ಪ್ರಸ್ತಾಪಿಸಿದ ವಿಚಾರಗಳೆಲ್ಲವನ್ನೂ ಅಧಿಕಾರಿಗಳು ಪರಿಗಣಿಸಿದ್ದರು. ಆದರೆ, ಸಿಇಸಿ ಅಪ್ರತಿಕ್ರಿಯಿ ಸುವ ವೇಳೆಗೆ ಟಿಎಂಸಿ ನಾಯಕರು ಅನೇಕ ಬಾರಿ ಮಧ್ಯಪ್ರವೇಶಿಸಿದರು. ಕಾನೂನು ಮೇಲು ಗೈ ಸಾಧಿಸುತ್ತದೆ. ಯಾರೇ ಕಾನೂನನ್ನು ಕೈಗೆತ್ತಿಕೊಂಡರೂ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಇಸಿ ಹೇಳುತ್ತಿದ್ದಂತೆಯೇ ಸಿಡಿಮಿಡಿಗೊಂಡ ಮಮತಾ ಸಭೆಯಿಂದ ಹೊರ ನಡೆದರು.