ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾಂತೇವಾಡ: ಆರು ನಕ್ಸಲರು ಪೊಲೀಸರಿಗೆ ಶರಣು

Last Updated 19 ಫೆಬ್ರುವರಿ 2021, 11:01 IST
ಅಕ್ಷರ ಗಾತ್ರ

ದಾಂತೇವಾಡ: ಛತ್ತೀಸ್‌ಗಡದ ದಾಂತೇವಾಡ ಜಿಲ್ಲೆಯಲ್ಲಿ ಶುಕ್ರವಾರ ಇಬ್ಬರು ದಂಪತಿ ಸಹಿತ ಆರು ಮಂದಿ ನಕ್ಸಲರು ಶರಣಾಗತರಾಗಿದ್ದಾರೆ. ಇವರ ಬಗ್ಗೆ ಸುಳಿವು ನೀಡಿದವರಿಗೆ ಒಟ್ಟು ₹15 ಲಕ್ಷಬಹುಮಾನ ಘೋಷಿಸಲಾಗಿತ್ತು.

‘ಮಾವೊವಾದಿಗಳ ಪೊಳ್ಳಾದ ತತ್ವಗಳಿಂದ ನಿರಾಶೆಗೊಂಡಿದ್ದೆವು. ಪೊಲೀಸರ ‘ಲೋನ್‌ ವರೋತು‘(ಮರಳಿ ಮನೆಗೆ) ಅಭಿಯಾನ ನಮ್ಮನ್ನು ಹಿಂಸೆ ತೊರೆಯುವಂತೆ ಪ್ರೇರೇಪಿಸಿದೆ‘ ಎಂದು ಹೇಳಿರುವ ನಕ್ಸಲ್ ಕಾರ್ಯಕರ್ತರು ಸಿಆರ್‌ಪಿಎಫ್ ಅಧಿಕಾರಿಗಳ ಎದುರು ಶರಣರಾಗತರಾದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.

ಮಾವೋವಾದಿಗಳ ಇಂದ್ರಾವತಿ ಪ್ರದೇಶ ಸಮಿತಿಯ ಕಮ್ಲು ಅಲಿಯಾಸ್ ಸಂತೋಷ್ ಪೋಡಿಯಮ್ (25), ಆತನ ಪತ್ನಿ ಪಾಯ್ಕೆ ಕೊವಾಸಿ (22), ಪೂರೈಕೆ ತಂಡದ ಸದಸ್ಯರಾದಲಿಂಗಾ ರಾಮ್ ಯುಕಿ (36), ಆತನ ಪತ್ನಿ ಭೂಮೆಯುಕಿ (28), ಕಾಟೆಕೇಲ್ಯನ್‌ ಪ್ರದೇಶ ಸಮಿತಿಯ ಕುಮಾರಿ ಜೋಗಿ (36), ಚೇತನಾ ನಾಟ್ಯ ಮಂಡಿಯ ಪಾಂಡೆ ಕವಾಸಿ ಶರಣಾದವರು.

ಇವರು ಕಳೆದ 15 ವರ್ಷಗಳಿಂದ ನಿಷೇಧಿತ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT