ಲಖನೌ: ರೈಲು ಹರಿದು ಆರು ಮಹಿಳೆಯರು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ನಡೆದಿದೆ.

‘ಕಾರ್ತಿಕ ಪೌರ್ಣಿಮೆಯ ಅಂಗವಾಗಿ ಗಂಗಾ ಸ್ನಾನ ಮಾಡಲು ತೆರಳುತ್ತಿದ್ದ ಮಹಿಳೆಯರು ಛುನಾರ್ ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ವೇಳೆ ಅವರ ಮೇಲೆ ಹೌರಾ–ಕಲ್ಕಾ ಎಕ್ಸ್ಪ್ರೆಸ್ ರೈಲು ಹರಿದಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೇರೊಂದು ರೈಲಿನಿಂದ ಇಳಿದು ಪ್ಲಾಟ್ಫಾರ್ಮ್ಗೆ ಹೋಗುವ ಸಲುವಾಗಿ ಮಹಿಳೆಯರು ರೈಲು ಹಳಿಯನ್ನು ದಾಟುತ್ತಿದ್ದರು. ಮೇಲ್ಸೇತುವೆ ಮೂಲಕ ತೆರಳುವ ಬದಲು ಅವರು ರೈಲು ಹಳಿಯ ಮೇಲೆಯೇ ಹೋಗಿದ್ದರಿಂದ ಅವಘಡ ಸಂಭವಿಸಿದೆ.

ಮೃತರಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರು ಎಂದು ಮೂಲಗಳು ತಿಳಿಸಿವೆ. ಘಟನೆಯ ಬಳಿಕ ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು.