ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತ ಮಾಡಿದ್ದು ತಪ್ಪು ನಿರ್ಧಾರ: ಚಿದಂಬರಂ

Last Updated 1 ಏಪ್ರಿಲ್ 2020, 14:36 IST
ಅಕ್ಷರ ಗಾತ್ರ

ನವದೆಹಲಿ:ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತಮಾಡಿರುವುದು ತಪ್ಪು ನಿರ್ಧಾರ. ಸರ್ಕಾರ ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಕಾಂಗ್ರೆಸ್ ನೇತಾರ ಪಿ.ಚಿದಂಬರಂ ಹೇಳಿದ್ದಾರೆ.

ಕಳೆದ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 4ರಿಂದ ಮೇಲಕ್ಕೇರಿಲ್ಲ. ಈ ಹೊತ್ತಲ್ಲಿ ಜಿಡಿಪಿಯತ್ತ ಗಮನ ಹರಿಸುವುದಕ್ಕಿಂತಜನರನ್ನು ಬದುಕಿಸುವ ಕಾರ್ಯದತ್ತ ಗಮನ ಹರಿಸಬೇಕು.

ಸರ್ಕಾರ ಮೂರ್ಖತನದ ಸಲಹೆಗಳನ್ನು ಕೆಲವೊಮ್ಮೆ ಪಾಲಿಸುತ್ತಿರುತ್ತದೆ. ಇದೆಂಥಾ ಮೂರ್ಖತನದ ಸಲಹೆ ಎಂದು ನನಗೆ ಅಚ್ಚರಿಯಾಗುತ್ತಿದೆ. ಪಿಪಿಎಫ್ ಮತ್ತು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕಡಿಮೆ ಮಾಡುವುದು ತಾಂತ್ರಿಕವಾಗಿ ಸರಿ ಎನಿಸಿದರೂ ಈ ಹೊತ್ತಲ್ಲಿ ಅದನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಚಿದಂಬರಂ ಟ್ವೀಟಿಸಿದ್ದಾರೆ.

ಸಂಕಷ್ಟದಲ್ಲಿರುವಾಗ ಮತ್ತು ಸಂಬಳ ಬಗ್ಗೆ ಅನಿಶ್ಚಿತತೆ ಇರುವಾಗ ಜನರು ಉಳಿತಾಯ ಯೋಜನೆಯ ಬಡ್ಡಿದರವನ್ನೇಅವಲಂಬಿಸಿರುತ್ತಾರೆ. ಹಾಗಾಗಿ ಸರ್ಕಾರ ತಮ್ಮ ನಿರ್ಧಾರದ ಬಗ್ಗೆ ಮರುಪರಿಶೀಲಿಸಿ ಜೂನ್ 30ರ ವರೆಗೆ ಹಳೇ ದರವನ್ನೇ ಮುಂದುವರಿಸಬೇಕು ಎಂದು ಅವರು ಹೇಳಿದ್ದಾರೆ.

ಮೂರು ತ್ರೈಮಾಸಿಕದ ಅಭಿವೃದ್ಧಿ ದರವು ಕ್ರಮವಾಗಿ ಶೇ5.6, ಶೇ5.1 ಮತ್ತು ಶೇ4.7 ಆಗಿದೆ. 2019-20ನೇ ವರ್ಷದ ನಾಲ್ಕನೇ ತ್ರೈಮಾಸಿಕವು ಮಂಗಳವಾರಕ್ಕೆಮಗಿದಿದೆ. ನಾಲ್ಕನೇ ತ್ರೈಮಾಸಿಕದ ಅಭಿವೃದ್ಧಿ ದರವು ಶೇ.4ಕ್ಕಿಂತ ಹೆಚ್ಚಿಲ್ಲ. ಹಾಗಾಗಿ 2019-20ನೇ ವರ್ಷದ ವಾರ್ಷಿಕ ಜಿಡಿಪಿ ಶೇ.4.8 ಆಗುವ ಮೂಲಕ ನಿರಾಸೆ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT