ಚೆನ್ನೈ: ಬಾಹ್ಯಾಕಾಶದಲ್ಲಿ ಜೋಡಣೆ ಪ್ರಯೋಗ ಉದ್ದೇಶದಿಂದ ‘ಸ್ಪೇಡೆಕ್ಸ್’ ಯೋಜನೆಯಡಿ ಉಡ್ಡಯನ ಮಾಡಿರುವ ಎರಡು ಉಪಗ್ರಹಗಳು ಶುಕ್ರವಾರ ರಾತ್ರಿ 1.5 ಕಿ.ಮೀ. ಅಂತರದಲ್ಲಿದ್ದವು ಎಂದು ಇಸ್ರೊ ತಿಳಿಸಿದೆ.

‘ಶನಿವಾರದ ಬೆಳಿಗ್ಗೆ ವೇಳೆಗೆ, ಈ ಉಪಗ್ರಹಗಳ ನಡುವಿನ ಅಂತರ 500 ಮೀಟರ್ ಇರುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಇಸ್ರೊ ಪ್ರಕಟಣೆಯಲ್ಲಿ ತಿಳಿಸಿದೆ.

ಅವುಗಳ ನಡುವಿನ ಅಂತರವನ್ನು ಮೊದಲು 15 ಮೀಟರ್ಗೆ, ನಂತರ 3 ಮೀಟರ್ಗೆ ಇಳಿಸಿ, ಜೋಡಣೆ ಮಾಡುವ (ಡಾಕಿಂಗ್) ಯೋಜನೆ ರೂಪಿಸಲಾಗಿದೆ. ಆದರೆ, ‘ಡಾಕಿಂಗ್’ ಯಾವಾಗ ಕಾರ್ಯಗತವಾಗಲಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಎರಡೂ ಉಪಗ್ರಹಗಳನ್ನು ಜ.7ರಂದು ಜೋಡಿಸಲು (ಡಾಕಿಂಗ್) ಇಸ್ರೊ ಯೋಜಿಸಿತ್ತು. ಅವುಗಳ ನಡುವಿನ ಅಂತರ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಇದ್ದ ಕಾರಣ, ಈ ಕಾರ್ಯವನ್ನು ಜ.9ಕ್ಕೆ ಮುಂದೂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.