ಶಬರಿಮಲೆ: ಸಾಂಪ್ರದಾಯಿಕ ಕಾಡುದಾರಿಯಲ್ಲಿ ಪುಲ್ಲುಮೇಡು ಮತ್ತು ಎರುಮೇಲಿ ಮೂಲಕ ಪಾದಯಾತ್ರೆಯಲ್ಲಿ ಶಬರಿಮಲೆಗೆ ಆಗಮಿಸುವ ಭಕ್ತರಿಗೆ ಶೀಘ್ರದಲ್ಲೇ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗುವುದು ಎಂದು ತಿರುವಾಂಕೂರ್ ದೇವಸಂ ಮಂಡಳಿ ಅಧ್ಯಕ್ಷರಾದ ಪಿ.ಎಸ್. ಪ್ರಶಾಂತ್ ತಿಳಿಸಿದ್ದಾರೆ.

ಅರಣ್ಯ ಇಲಾಖೆ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಯಾತ್ರಾರ್ಥಿಗಳಿಗೆ ವಿಶೇಷ ಟ್ಯಾಗ್ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಟ್ಯಾಗ್ ನೀಡುವ ಹೊಣೆ ಅರಣ್ಯ ಅಧಿಕಾರಿಗಳದ್ದೇ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಪಂಪಾದಿಂದ ಸ್ವಾಮಿ ಅಯ್ಯಪ್ಪನ್ ಮಾರ್ಗವಾಗಿ ಅವರು ಸನ್ನಿಧಾನಕ್ಕೆ ತೆರಳಬಹುದು. ನೀಲಿಮಲೆ ಮಾರ್ಗವಾಗಿ ಬರುವ ಭಕ್ತರಿಗೂ ವಿಶೇಷ ದರ್ಶನ ಸಿಗಲಿದೆ ಎಂದು ಅವರು ಹೇಳಿದ್ದಾರೆ.

‘ಮರಕ್ಕೂಟಂನಲ್ಲಿ ಈ ವಿಶೇಷ ಟ್ಯಾಗ್ಗಳನ್ನು ಹೊಂದಿರುವ ಯಾತ್ರಾರ್ಥಿಗಳು ಶರಣ್ಕುತಿ ಮಾರ್ಗವನ್ನು ತಪ್ಪಿಸಿ ಚಂದ್ರನಂದನ್ ರಸ್ತೆಯ ಮೂಲಕ ಸನ್ನಿಧಾನವನ್ನು ಪ್ರವೇಶಿಸಬಹುದು. ಪುಲ್ಲುಮೇಡು ಮತ್ತು ಎರುಮೇಲಿಯಿಂದ ಈ ಗೊತ್ತುಪಡಿಸಿದ ಅರಣ್ಯ ಮಾರ್ಗಗಳ ಮೂಲಕ ಬರುವವರು ವಿಶೇಷ ಟ್ಯಾಗ್ಗಳನ್ನು ಸ್ವೀಕರಿಸುತ್ತಾರೆ. ದರ್ಶನಕ್ಕಾಗಿ ದೇವಾಲಯದಲ್ಲಿ ಮೀಸಲಾದ ಸರದಿಯನ್ನು ಬಳಸಬಹುದು’ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.