ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ಉದ್ಯೋಗಿಗಳ ವಜಾಕ್ಕೆ ಮುಂದಾದ ಸ್ಪೈಸ್‌ಜೆಟ್‌‌

Published 12 ಫೆಬ್ರುವರಿ 2024, 10:59 IST
Last Updated 12 ಫೆಬ್ರುವರಿ 2024, 10:59 IST
ಅಕ್ಷರ ಗಾತ್ರ

ಮುಂಬೈ: ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಸ್ಪೈಸ್‌ಜೆಟ್‌ ವಿಮಾನಯಾನ ಸಂಸ್ಥೆಯು ಒಂದು ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿಲು ಮುಂದಾಗಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ. 

‘ಆರ್ಥಿಕ ಮುಗ್ಗಟ್ಟು, ಮೇಲಿಂದ ಮೇಲೆ ಎದುರಾದ ಕಾನೂನು ತೊಂದರೆಗಳು, ಸೇವೆಯಲ್ಲಿರುವ ವಿಮಾನಗಳ ಸಂಖ್ಯೆಯನ್ನು ಪರಿಗಣಿಸಿ ಹೆಚ್ಚುವರಿ ಸಿಬ್ಬಂದಿ ವಜಾಗೊಳಿಸಲು ಯೋಜಿಸಿದೆ. ಈ ಕುರಿತು ಈ ವಾರ ಅಂತಿಮ ನಿರ್ಧಾರವಾಗುವ ಸಾಧ್ಯತೆ ಇದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಸ್ಪೈಸ್‌ಜೆಟ್‌ ವಿಮಾನ ಸಂಸ್ಥೆಯ ವಕ್ತಾರರು ಮಾತನಾಡಿ, ‘ವಿಮಾನಯಾನ ಸಂಸ್ಥೆಯು ವೆಚ್ಚ ಕಡಿಮೆ ಮಾಡಿ, ಲಾಭ ಗಳಿಸಲು ಹಲವು ಕ್ರಮಗಳನ್ನು ಜಾರಿಗೆ ತರಲು ಯೋಜಿಸುತ್ತಿದೆ’ ಎಂದರು.

ಸಂಸ್ಥೆಯಲ್ಲಿ ಸುಮಾರು 9 ಸಾವಿರ ಉದ್ಯೋಗಿಗಳಿದ್ದಾರೆ. ಅದನ್ನು ಈಗ ಶೇ10 ರಿಂದ 15 ರಷ್ಟು ಕಡಿಮೆ ಮಾಡಲು ಚಿಂತನೆ ನಡೆಲಾಗುತ್ತಿದೆ. ಶೇ 15 ಎಂದರೆ 1,350 ಸಿಬ್ಬಂದಿ. ಇದರಿಂದಾಗಿ ಸುಮಾರು ₹100 ಕೋಟಿ ಉಳಿತಾಯವಾಗಲಿದೆ ಎಂದೂ ಅವರು ಹೇಳಿದ್ದಾರೆ.

ಉದ್ಯೋಗಿಗಳ ವಜಾದ ಬಗ್ಗೆ ಸ್ಪೈಸ್‌ಜೆಟ್‌ ವಿಮಾನಯಾನ ಸಂಸ್ಥೆ ಅಧಿಕೃತವಾಗಿ ಯಾವುದೇ ಹೇಳಿಕೆಗಳನ್ನು ಬಿಡುಗಡೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT