ಹಾಂಗ್ಝೌ: ಭಾರತದ ಸೌರವ್ ಘೋಷಾಲ್ ಬುಧವಾರ ಹಾಂಗ್ಕಾಂಗ್ನ ಹೆನ್ರಿ ಲ್ಯುಂಗ್ ಅವರನ್ನು ಪುರುಷರ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಸೋಲಿಸಿ, ಏಷ್ಯನ್ ಕ್ರೀಡಾಕೂಟದ ಸ್ಕ್ವಾಷ್ನಲ್ಲಿ ಎರಡನೇ ಚಿನ್ನದ ಪದಕದತ್ತ ದಿಟ್ಟ ಹೆಜ್ಜೆಯಿಟ್ಟರು.

ಪುರುಷರ ತಂಡ ವಿಭಾಗದಲ್ಲಿ ಚಿನ್ನಕ್ಕೆ ಕಾಣಿಕೆ ನೀಡಿದ್ದ ಸೌರವ್ 11–2, 11–2, 11–6 ರ ರಿಂದ ಹೆನ್ರಿ ವಿರುದ್ಧ ಅಧಿಕಾರಯುತ ಜಯಗಳಿಸಲು ತೆಗೆದುಕೊಂಡಿದ್ದು 33 ನಿಮಿಷಗಳನ್ನಷ್ಟೇ. ವಿಶ್ವ ಕ್ರಮಾಂಕದಲ್ಲಿ ಭಾರತದ ಆಟಗಾರ 19ನೇ ಸ್ಥಾನದಲ್ಲಿದ್ದಾರೆ.

ಎರಡನೇ ಶ್ರೇಯಾಂಕದ ಘೋಷಾಲ್ ಗುರುವಾರ ಫೈನಲ್ನಲ್ಲಿ ಅಗ್ರ ಶ್ರೇಯಾಂಕದ ಏನ್ ಯೊವ್ ಎನ್ಜಿ (ಮಲೇಷ್ಯಾ) ಅವರನ್ನು ಎದುರಿಸಲಿದ್ದಾರೆ.

ಸ್ಕ್ವಾಷ್ ಕೋರ್ಟ್ನಲ್ಲಿ ಭಾರತ ಮೂರು ಚಿನ್ನದ ಪದಕಗಳನ್ನು ಗೆಲ್ಲುವ ಅವಕಾಶವಿದೆ. ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ಪಾಲ್ ಸಂಧು ಅವರು ಮಿಕ್ಸೆಡ್ ಡಬಲ್ಸ್ ಫೈನಲ್ ತಲುಪಿದ್ದು, ಗುರುವಾರ ಚಿನ್ನದ ಪದಕಕ್ಕೆ ಆಡಲಿದ್ದಾರೆ.

ಇದಕ್ಕೆ ಮೊದಲು, ದೀಪಿಕಾ ಮತ್ತು ಹರಿಂದರ್ಪಾಲ್ ಸಮಿಫೈನಲ್ನಲ್ಲಿ 7–11, 11–7, 11–9 ರಿಂದ ಹಾಂಗ್ಕಾಂಗ್ನ ಲೀ ಕಾ ಯಿ ಮತ್ತು ವಾಂಗ್ ಚಿ ಹಿಮ್ ಅವರನ್ನು ಸೋಲಿಸಿದ್ದರು.

ಆದರೆ ಅಭಯ್ ಸಿಂಗ್ ಮತ್ತು ಅನಾಹತ್ ಸಿಂಗ್ ಅವರು ಸೆಮಿಫೈನಲ್ನಲ್ಲಿ ಸೋತಿದ್ದು ಇದ್ದುದರಲ್ಲಿ ಸ್ವಲ್ಪ ಹಿನ್ನಡೆ ಎನಿಸಿತು. ಈ ಜೋಡಿ ಕಂಚಿನ ಪದಕಕ್ಕೆ ತೃಪ್ತರಾಗಬೇಕಾಯಿತು. ಮಲೇಷ್ಯಾದ ಆಯಿಫಾ ಬಿಂತಿ ಅಜ್ಮಾನ್– ಮೊಹಮ್ಮದ್ ಸೈಫಿಕ್ ಬಿನ್ ಮೊಹಮದ್ ಕಮಲ್ ಅವರು ಭಾರತದ ಜೋಡಿಯನ್ನು ಸೆಮಿಫೈನಲ್ನಲ್ಲಿ ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.