ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀನಗರ: ಈ ಋತುವಿನ ಕನಿಷ್ಠ ತಾಪಮಾನ ಮೈನಸ್ 3.4 ಡಿಗ್ರಿ ಸೆಲ್ಸಿಯಸ್ ದಾಖಲು

Published : 16 ಡಿಸೆಂಬರ್ 2022, 6:34 IST
ಫಾಲೋ ಮಾಡಿ
Comments

ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಈ ವರ್ಷ ಚಳಿಗಾಲದ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ.

ಕಳೆದ ಎರಡು ದಿನರಾತ್ರಿ ವೇಳೆ ಮೈನಸ್ 3.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕಾಶ್ಮೀರದ ಕುಪ್ವಾರದಲ್ಲೂ ಕನಿಷ್ಠ ತಾಪಮಾನ ಮೈನಸ್ 3.6 ಡಿಗ್ರಿ ಸೆಲ್ಸಿಯಸ್ ಮತ್ತು ಖಾಸಿಗುಂಡ್‌ನಲ್ಲಿ ಮೈನಸ್ 3.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಅಮರನಾಥ ಯಾತ್ರಿಕರ ಎರಡು ಬೇಸ್ ಕ್ಯಾಂಪ್‌ಗಳ ಪೈಕಿ ಒಂದಾದ ಪಹಲ್‌ಗಾಮ್‌ನಲ್ಲಿ ಮೈನಸ್ 5.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಗುಲ್ಮಾರ್ಗ್‌ನ ಸ್ಕೀಯಿಂಗ್ ರೆಸಾರ್ಟ್‌ನಲ್ಲಿ 2.5 ಡಿಗ್ರಿ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಐದು ದಿನಗಳು ಕಣಿವೆಯಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT