ನವದೆಹಲಿ: ‘2025ರ ವೇಳೆಗೆ ಭಾರತದಿಂದ ಕ್ಷಯರೋಗ (ಟಿ.ಬಿ) ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರಯತ್ನಗಳು ಸಾಗಿದ್ದು, ಈ ನಿಟ್ಟಿನಲ್ಲಿ ಪ್ರಕರಣಗಳ ಸಂಖ್ಯೆಗಳು ಕಡಿಮೆಯಾಗುತ್ತಿವೆ’ ಎಂದು ಪ್ರಧಾನಿ ಮೋದಿ ಹೇಳಿದರು.

‘ಅಂತೆಯೇ ದೇಶದಾದ್ಯಂತ 'ಕಾಲಾ ಅಜರ್", ಕುಷ್ಠರೋಗ ಮತ್ತು ಮಲೇರಿಯಾದ ಪ್ರಕರಣಗಳಲ್ಲೂ ಗಮನಾರ್ಹವಾಗಿ ಇಳಿಕೆಯಾಗಿದೆ. 2013ರಲ್ಲಿ ದೇಶದಲ್ಲಿ ಕಾಲಾ ಅಜರ್‌ನ 11 ಸಾವಿರ ಪ್ರಕರಣಗಳಿದ್ದವು. ಈಗ ಈ ಸಂಖ್ಯೆ ಸಾವಿರಕ್ಕಿಂತಲೂ ಕಡಿಮೆಯಾಗಿದೆ. 2013ರಲ್ಲಿ 10 ಲಕ್ಷ ಮಲೇರಿಯಾ ಪ್ರಕರಣಗಳಿದ್ದವು, 2022ರ ವೇಳೆಗೆ ಈ ಪ್ರಕರಣ ಸಂಖ್ಯೆ 2 ಲಕ್ಷಕ್ಕೆ ಇಳಿದಿದೆ. ಕುಷ್ಠರೋಗಿಗಳ ಸಂಖ್ಯೆಯೂ 1.25 ಲಕ್ಷದಿಂದ 70ರಿಂದ 75 ಸಾವಿರಕ್ಕೆ ಇಳಿದಿದೆ’ ಎಂದು ಮಾಹಿತಿ ನೀಡಿದರು.

‘ಶನಿವಾರ 1 ಕೋಟಿ ಜನರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಈ ಕಾರ್ಡ್‌ಗಳು ಆಸ್ಪತ್ರೆಗಳಲ್ಲಿ ಬಡವರಿಗೆ ₹ 5 ಲಕ್ಷದ ತನಕ ಚಿಕಿತ್ಸೆ ಪಡೆಯಲು ಎಟಿಎಂ ಕಾರ್ಡ್‌ಗಳಂತೆ ಕಾರ್ಯನಿರ್ವಹಿಸಲಿವೆ’ ಎಂದೂ ಮೋದಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.