ಹೈದರಾಬಾದ್: ಪಾರ್ಟಿ ಮಾಡಿದ ನಂತರ ಸ್ನೇಹಿತರ ಮಧ್ಯೆ ಬಿಲ್ ಹಂಚಿಕೆ ವಿಚಾರದಲ್ಲಿ ಉಂಟಾದ ಹಣಕಾಸಿನ ಜಗಳವು, 19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ನಾರಪಲ್ಲಿಯಲ್ಲಿರುವ ಖಾಸಗಿ ವಸತಿ ನಿಲಯದ ಕೊಠಡಿಯಲ್ಲಿ ಭಾನುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ನೇಹಿತರ ಗುಂಪೊಂದು ಬಾರ್ನಲ್ಲಿ ಪಾರ್ಟಿ ಮಾಡಿದ್ದು, ಬಿಲ್ ಹಂಚಿಕೊಳ್ಳುವ ವಿಷಯದಲ್ಲಿ ಗಲಾಟೆಯಾಗಿತ್ತು ಎಂದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಗೂ ಮೊದಲು ವಿಡಿಯೊ ಮಾಡಿದ್ದು, ‘ಕೆಲವರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಅದಕ್ಕಾಗಿ ಬೆದರಿಕೆ ಹಾಗೂ ಅವಮಾನ ಮಾಡಿದ್ದರು. ಬಲವಂತವಾಗಿ ಬಾರ್ಗೆ ಕರೆದೊಯ್ದು, ಮದ್ಯ ಸೇವಿಸುವಂತೆ ಒತ್ತಾಯ ಮಾಡಿದ್ದರು. ನಂತರ ₹10 ಸಾವಿರ ಬಿಲ್ ಕಟ್ಟುವಂತೆ ಒತ್ತಾಯಿಸಿದ್ದರು’ ಎಂದಿದ್ದಾನೆ.

ಮೃತನ ತಂದೆಯ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.