ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

INS Vagir : ನೌಕಾಪಡೆಗೆ ಜಲಾಂತರ್ಗಾಮಿ ಐಎನ್‌ಎಸ್ ವಾಗಿರ್ ಸೇರ್ಪಡೆ

Last Updated 23 ಜನವರಿ 2023, 7:42 IST
ಅಕ್ಷರ ಗಾತ್ರ

ಮುಂಬೈ: ಕಲ್ವರಿ ದರ್ಜೆಯ ಐದನೇ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ವಾಗಿರ್ ಭಾರತೀಯ ನೌಕಾಪಡೆಗೆ ಸೋಮವಾರ ಸೇರ್ಪಡೆಯಾಗಿದೆ.

ಇದರೊಂದಗೆ ಭಾರತೀಯ ನೌಕಾಪಡೆಯು ಮತ್ತಷ್ಟು ಬಲವರ್ಧಿಸಿಕೊಂಡಿದೆ.

ಐಎನ್‌ಎಸ್ ವಾಗಿರ್ ಅನ್ನು ಫ್ರಾನ್ಸ್‌ ತಂತ್ರಜ್ಞಾನದೊಂದಿಗೆ ಮಜಗಾನ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿದೆ.

ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ಉಪಸ್ಥಿತಿಯಲ್ಲಿ ಜಲಾಂತರ್ಗಾಮಿ ನೌಕೆ ಸೇರ್ಪಡೆಗೊಂಡಿದೆ.

ಸುಧಾರಿತ ತಂತ್ರಜ್ಞಾನದ ಐಎನ್‌ಎಸ್ ವಾಗಿರ್, ಶತ್ರುಗಳ ದಾಳಿ ತಡೆಯಲು, ಸಾಗರದಲ್ಲಿ ಭಾರತದ ರಕ್ಷಣೆಯ ಬಲವರ್ಧನೆಗೆ, ಗುಪ್ತಚರ ಹಾಗೂ ನಿಗಾ ವಹಿಸಲು ನೆರವಾಗಲಿದೆ. ಜಗತ್ತಿನ ಅತ್ಯುತ್ತಮ ಸೆನ್ಸಾರ್‌ಗಳನ್ನು ಇದು ಒಳಗೊಂಡಿವೆ.

ವಾಗಿರ್ ಅಂದರೆ 'ಸ್ಯಾಂಡ್ ಷಾರ್ಕ್' ಎಂದಾಗಿದ್ದು, ರಹಸ್ಯ, ನಿರ್ಭಯತೆಯನ್ನು ಪ್ರತಿಬಿಂಬಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT