ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಒಟ್ಟು ನಾಲ್ಕು ಹಕ್ಕುಚ್ಯುತಿ ನೋಟಿಸ್ ನೀಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ತಿಳಿಸಿದರು. ‘ಏನಾಗುತ್ತದೆ ಎಂದು ಕಾದು ನೋಡೋಣ‘ ಎಂದರು.

‘82 ವರ್ಷದ ಹಿಂದೆ ಇದೇ ದಿನ ಮಹಾತ್ಮ ಗಾಂಧಿ ಅವರು, ‘ಮಾಡು ಇಲ್ಲವೇ ಮಡಿ’ ಎಂದು ದೇಶಕ್ಕೆ ಕರೆ ನೀಡಿದ್ದರು’ ಎಂದು ಅವರು ‘ಎಕ್ಸ್’ನಲ್ಲಿ ನೆನಪಿಸಿದರು.

‘ರಾಜ್ಯಸಭೆಯ ಈ ಸಲದ ಅಧಿವೇಶನದಲ್ಲಿ ನಾಲ್ಕು ಹಕ್ಕುಚ್ಯುತಿ ನೋಟಿಸ್ ನೀಡಲಾಗಿದೆ. (ಜೈವಿಕವಲ್ಲದ) ಪ್ರಧಾನಮಂತ್ರಿ ಅವರು ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ವಿರುದ್ಧ ನೀಡಿದ್ದ ಕೀಳುಮಟ್ಟದ ಹೇಳಿಕೆ, ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಕಡತದಿಂದ ತೆಗೆದುಹಾಕಿದ ಭಾಷಣವಿರುವ ವಿಡಿಯೊ ಅನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎರಡು ಹಕ್ಕುಚ್ಯುತಿ ನೋಟಿಸ್ ನೀಡಲಾಗಿದೆ. ಅದೇ ರೀತಿ ವಯನಾಡು ಭೂಕುಸಿತ ಕುರಿತು ರಾಜ್ಯಸಭೆಯ ದಿಕ್ಕುತಪ್ಪಿಸುವ ಹೇಳಿಕೆ ನೀಡಿದ್ದ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಹಕ್ಕುಚ್ಯುತಿ ನೋಟಿಸ್ ನೀಡಲಾಗಿದೆ ಎಂದು ‘ಎಕ್ಸ್’ನಲ್ಲಿ ತಿಳಿಸಿದರು.

ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ‘ಸಂವಿಧಾನ ಪ್ರಸ್ತಾವನೆ’ಯನ್ನು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸದನದ ಹಾದಿ ತಪ್ಪಿಸಿದ್ದಾರೆ ಎಂದು ಆರೋಪಿಸಿ ಹಕ್ಕುಚ್ಯುತಿ ನೋಟಿಸ್ ನೀಡಲಾಗಿದೆ ಎಂದರು.

‘ಆಗಸ್ಟ್ 7ರಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಎನ್‌ಸಿಇಆರ್‌ಟಿಯ 3 ಹಾಗೂ 6ನೇ ತರಗತಿಯ ಪಠ್ಯಪುಸ್ತಕದಲ್ಲಿ ‘ಸಂವಿಧಾನದ ಪ್ರಸ್ತಾವನೆ’ ತೆಗೆದುಹಾಕಿದ ವಿಚಾರವನ್ನು ಸದನದಲ್ಲಿ ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿದ್ದ ಸಚಿವ ಧರ್ಮೇಂದ್ರ ಪ್ರಧಾನ್, ‘6ನೇ ತರಗತಿಯ ಪಠ್ಯಪುಸ್ತಕವು ‘ಸಂವಿಧಾನದ ಪ್ರಸ್ತಾವನೆ’ಯನ್ನು ಒಳಗೊಂಡಿದೆ ಎಂದಿದ್ದರು. ಅವರು ನೀಡಿದ ಸಮರ್ಥನೆಯು ವಾಸ್ತವಿಕವಾಗಿ ತಪ್ಪು ಹಾಗೂ ದಾರಿ ತಪ್ಪಿಸುವಂತಿದೆ’ ಎಂದು ಆಗಸ್ಟ್ 8ರಂದು ಧನಕರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

‘ಇದಕ್ಕೆ ಸಂಬಂಧಿಸಿದಂತೆ ನಾನು 2022 ಹಾಗೂ 2024ರ 3 ಮತ್ತು 6ನೇ ತರಗತಿಯ ಪಠ್ಯಪುಸ್ತಕಗಳನ್ನು ಪತ್ರದ ಜೊತೆಗೆ ಕಳುಹಿಸಿದ್ದೇನೆ. 2022ರ ಪಠ್ಯಪುಸ್ತಕದಲ್ಲಿ ‘ಸಂವಿಧಾನದ ಪ್ರಸ್ತಾವನೆ’ಯು ಒಳಗೊಡಿದೆ. 2024ರ ಪಠ್ಯಪುಸ್ತಕದಲ್ಲಿ ಕಾಣುತ್ತಿಲ್ಲ’ ಎಂದು ಸಭಾಪತಿಗೆ ಬರೆದ ದೂರಿನಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.