ನವದೆಹಲಿ: ಮಲ್ಟಿಪ್ಲೆಕ್ಸ್ಗಳ ಪ್ರತಿಯೊಂದು ಟಿಕೆಟ್ ಮಾರಾಟಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ನಿರ್ವಹಿಸಬೇಕು ಎನ್ನುವ ಕರ್ನಾಟಕ ಹೈಕೋರ್ಟ್ನ ನಿರ್ದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
.ಮಲ್ಟಿಪ್ಲೆಕ್ಸ್ ಟಿಕೆಟ್ ದರ: ತಡೆ ತೆರವಿಗೆ ವಿಭಾಗೀಯ ನ್ಯಾಯಪೀಠ ನಕಾರ.
ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯದ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಗರಿಷ್ಠ ₹200 ಏಕರೂಪ ದರ ನಿಗದಿಪಡಿಸಿದ ರಾಜ್ಯ ಸರ್ಕಾರದ ಆದೇಶಕ್ಕೆ ಸೆಪ್ಟೆಂಬರ್ 30ಕ್ಕೆ ತಡೆ ನೀಡಿದ್ದ ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠ, ಟಿಕೆಟ್ ಮಾರಾಟದ ಲೆಕ್ಕಪತ್ರಗಳನ್ನು ನಿರ್ವಹಿಸಬೇಕು ಎಂದು ಸೂಚಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ಪೀಠದ ಮುಂದೆ ಸೋಮವಾರ ಬಂತು.
.ಮಲ್ಟಿಪ್ಲೆಕ್ಸ್ ಟಿಕೆಟ್: ₹200ರ ಮಿತಿ; ಸಿನಿಮಾಗಳಿಗೆ ಏಕರೂಪದ ಟಿಕೆಟ್ ದರ ನಿಗದಿ.
ಸಿನಿಮಾ ಕುಸಿಯುತ್ತಿದೆ. ಜನ ಬಂದು ಆನಂದಿಸಲು ಅದಕ್ಕೆ ನ್ಯಾಯಯುತ ದರ ನಿಗದಿ ಮಾಡಿ. ಇಲ್ಲದಿದ್ದರೆ ಚಿತ್ರಮಂದಿರ ಖಾಲಿಯಾಗಿರುತ್ತದೆ ಎಂದು ಹೇಳಿದ ಕೋರ್ಟ್, ₹ 200ಕ್ಕಿಂತ ಹೆಚ್ಚು ದರ ನಿಗದಿ ಮಾಡುವಂತಿಲ್ಲ ಎನ್ನುವ ವಿಭಾಗೀಯ ಪೀಠದ ಪರವಾಗಿ ನಾವಿದ್ದೇವೆ ಎಂದು ನುಡಿಯಿತು.

ಅಲ್ಲದೆ ನೀರಿನ ಬಾಟಲಿಗೆ ₹ 100 ವಿಧಿಸಲಾಗುತ್ತಿದೆ ಎನ್ನುವ ವಾದದ ಬಂದಾಗ ‘ಅದನ್ನು ಸರಿ ಪಡಿಸಬೇಕು’ ಎಂದು ಕೋರ್ಟ್ ಹೇಳಿತು.
.ಮಲ್ಟಿಪ್ಲೆಕ್ಸ್ ಟಿಕೆಟ್ ದರ ₹250 ಮೀರದಂತೆ ನಿಗದಿಪಡಿಸಿ: ಚಲನಚಿತ್ರ ವಾಣಿಜ್ಯ ಮಂಡಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.