ಬೆಂಗಳೂರು: ವಿಶ್ವದ ಅತಿ ದೊಡ್ಡ ಟ್ರ್ಯಾಕ್ಟರ್ ಮತ್ತು ಕೃಷಿ ಉಪಕರಣ ತಯಾರಕಾ ಸಂಸ್ಥೆ ಟ್ರ್ಯಾಕ್ಟರ್ಸ್ ಮತ್ತು ಫಾರ್ಮ್ ಎಕ್ವಿಪ್ಮೆಂಟ್ ಲಿಮಿಟೆಡ್ (ಟಫೆ) ಅಮೆರಿಕ ಮೂಲದ ಆಗ್ಕೊ ಸಂಸ್ಥೆ ನಡುವಿನ ಕಾರ್ಪೋರೇಟ್ ಸಮರ ಕೊನೆಗೂ ಅಂತ್ಯ ಕಂಡಿದೆ.

ಮ್ಯಾಸ್ಸಿ ಫರ್ಗುಸನ್ ಬ್ರ್ಯಾಂಡ್, ವಾಣಿಜ್ಯ ಮತ್ತು ಷೇರುಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳು ಹಾಗೂ ತಮ್ಮ ನಡುವಿನ ವಾಣಿಜ್ಯ ಸಂಬಂಧದ ಕುರಿತು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿಕೊಂಡಿದ್ದು, ಮುಂದಿನ ದಿನಗಳಲ್ಲಿ ಟಫೆ ಹಾಗೂ ಆಗ್ಕೊ ನಡುವಿನ ಸಂಬಂಧವನ್ನು ಸಂಪೂರ್ಣ ಕಡಿದುಕೊಳ್ಳುವ ಕುರಿತು ನಿರ್ಣಯಕ್ಕೆ ಬರಲಾಗಿದೆ.

ಈ ಎರಡೂ ಸಂಸ್ಥೆಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯವಾಗಿ ಟ್ರ್ಯಾಕ್ಟರ್ ಹಾಗೂ ಕೃಷಿ ಉಪಕರಣಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದವು, ದೇಶದ ಬಹುತೇಕ ರೈತರು ಈ ಕಂಪನಿಗಳ ಟ್ರಾಕ್ಟರ್ಗಳನ್ನೇ ಖರೀದಿ ಮಾಡುತ್ತಿದ್ದರು, ಮುಂದಿನ ದಿನಗಳಲ್ಲಿ ಅಮೆರಿಕ ಮೂಲಕ ಆಗ್ಕೋ ಸಂಸ್ಥೆ ಟ್ರಾಕ್ಟರ್ ತಯಾರಿಕೆಯಲ್ಲಿ ತನ್ನ ಹಸ್ತಕ್ಷೇಪವನ್ನು ಕೈಬಿಡಲಿದೆ.

ಈ ಒಪ್ಪಂದದ ಪ್ರಕಾರ, ಭಾರತ, ನೇಪಾಳ ಮತ್ತು ಭೂತಾನ್ನಲ್ಲಿ ಟ್ರ್ಯಾಕ್ಟರ್ ತಯಾರಿಕೆಯ ಮ್ಯಾಸ್ಸಿ ಫರ್ಗುಸನ್ ಬ್ರ್ಯಾಂಡ್ ಮಾಲೀಕತ್ವವನ್ನು ಟಫೆ ಹೊಂದಿರಲಿದೆ ಎಂದು ಟಫೆ ಸಂಸ್ಥೆಯ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಮಲ್ಲಿಕಾ ಶ್ರೀನಿವಾಸನ್ ತಿಳಿಸಿದ್ದಾರೆ.

ಜೊತೆಗೆ, ಮ್ಯಾಸ್ಸಿ ಫರ್ಗುಸನ್ ಹಾಗೂ ಇದಕ್ಕೆ ಸಂಬಂಧಿಸಿದ ಟ್ರೇಡ್ಮಾರ್ಕ್ನ ಎಲ್ಲಾ ಹಕ್ಕನ್ನು ಟಫೆ ಹೊಂದಿರಲಿದ್ದು, ಇನ್ನುಮುಂದೆ ಆಗ್ಕೊದೊಂದಿಗಿನ ಸಂಬಂಧ ಮುಂದುವರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಟಫೆ ಸಂಸ್ಥೆಯು ದೇಶೀಯ ಟ್ರ್ಯಾಕ್ಟರ್ ತಯಾರಕರ ಇಕ್ವಿಟಿಯ ಶೇ 20.7 ರಷ್ಟು ಹಾಗೂ ಲಖನೌ ಸಂಸ್ಥೆಯ ಯುಎಸ್ಡಿ 260 ಮಿಲಿಯ್್ನಷ್ಟು ಷೇರುಗಳನ್ನು ಮರಳಿ ಖರೀದಿಸಿದೆ. ಈ ಮೂಲಕ ಟಫೆ ಚೆನ್ನೈನಲ್ಲಿ ಹೊಂದಿರುವ ಪ್ರಧಾನ ಕಚೇರಿಯನ್ನು ಅಮಾಲ್ಗಮೇಷನ್ಸ್ ಗ್ರೂಪ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯನ್ನಾಗಿ ಮಾಡಿಕೊಳ್ಳಲಿದೆ.

ಟಫೆ ಮತ್ತು ಆಗ್ಕೊ ನಡುವೆ ಇದ್ದ ಎಲ್ಲಾ ವಾಣಿಜ್ಯ ಒಪ್ಪಂದಗಳನ್ನು ಪರಸ್ಪರ ರದ್ದುಗೊಳಿಸಿದ ಬಳಿಕ, ಬಾಕಿ ಇರುವ ಪೂರೈಕೆ ಆರ್ಡರ್ಗಳನ್ನು ಪೂರೈಸಲು ಹಾಗೂ ಒಪ್ಪಂದದ ನಿಯಮಗಳ ಅನುಸಾರ ಮಾರುಕಟ್ಟೆಗೆ ಬಿಡಿಭಾಗ ಪೂರೈಕೆಯನ್ನು ಮುಂದುವರಿಸಲು ಟಫೆ ಬದ್ಧವಿರಲಿದೆ ಎಂದು ಮಲ್ಲಿಕಾ ಶ್ರೀನಿವಾಸನ್ ಅವರು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.