ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರಿಯಾರ್ ಪ್ರತಿಮೆಗೆ ಕೇಸರಿ ಬಣ್ಣ; ಆಕ್ರೋಶ, ಪ್ರತಿಭಟನೆ

Last Updated 27 ಸೆಪ್ಟೆಂಬರ್ 2020, 16:30 IST
ಅಕ್ಷರ ಗಾತ್ರ

ತಿರುಚಿರಾಪಳ್ಳಿ(ತಮಿಳುನಾಡು):ಇನಾಮ್‌ಕೊಲತ್ತೂರ್‌ನಸಮತುವಾಪುರಂ ಕಾಲೋನಿಯಲ್ಲಿರುವಸಮಾಜ ಸುಧಾರಕ ಇ.ವಿ. ರಾಮಸ್ವಾಮಿ ಪೆರಿಯಾರ್ ಅವರ ಪುತ್ಥಳಿಗೆ ದುಷ್ಕರ್ಮಿಗಳು ಕೇಸರಿ ಬಣ್ಣ ಬಳಿದಿದ್ದು, ಈ ಪ್ರಕರಣ ತಮಿಳುನಾಡಿನ ರಾಜಕೀಯ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿಮೆಯ ಪಕ್ಕದಲ್ಲೇ ಚಪ್ಪಲಿಯೊಂದು ಪತ್ತೆಯಾಗಿದೆ. ಪ್ರತಿಮೆಯನ್ನು ವಿರೂಪಗೊಳಿಸಿರುವ ಇಂಥ ವಿಧ್ವಂಸಕ ಕೃತ್ಯದ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಸೇರಿದಂತೆ, ವಿವಿಧ ಪಕ್ಷಗಳ ರಾಜಕೀಯ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೆ ಇದೇ ರೀತಿ ಕೊಯಮತ್ತೂರಿನಲ್ಲಿ ವಿಚಾರವಾದಿ ನಾಯಕರ ಪ್ರತಿಮೆಯೊಂದಕ್ಕೆ ಕೇಸರಿ ಬಣ್ಣ ಬಳಿಯಲಾಗಿತ್ತು. ಇದು ರಾಜ್ಯದಲ್ಲಿ ಎರಡನೇ ಪ್ರಕರಣವಾಗಿದೆ.

ಘಟನೆಯಿಂದ ತೀವ್ರ ಆಕ್ರೋಶಗೊಂಡಸ್ಥಳೀಯರು ದಿಢೀರನೆ ಪ್ರತಿಭಟನೆ ನಡೆಸಿದರು. ಇದರಿಂದ ದಿಂಡಿಗಲ್‌ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ಥವಾಯಿತು.

ಘಟನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸ್ಟಾಲಿನ್, ‘ಪೆರಿಯಾರ್ ಒಬ್ಬ ದಾವಿಡರ್‌ ಕಳಗಂ ಚಳವಳಿಯ ನಾಯಕರಷ್ಟೇ ಅಲ್ಲ. ಅವರು ತಮಿಳರಿಗೇ ನಾಯಕರು. ಇಂಥ ವ್ಯಕ್ತಿಯ ಪ್ರತಿಮೆಯನ್ನು ವಿರೂಪಗೊಳಿಸಿರುವವರನ್ನು ಬಹಿಷ್ಕಾರಮಾಡಬೇಕು‘ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣ ಕುರಿತು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಪಿಎಂಕೆ ನಾಯಕ ಎಸ್ ರಾಮದಾಸ್, ಪ್ರತಿಮೆ ವಿರೂಪಳಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಎಂಡಿಎಂಕೆ ಸಂಸ್ಥಾಪಕ ಮತ್ತು ರಾಜ್ಯಸಭಾ ಸಂಸದ ವೈಕೊ, ಎಎಂಎಂಕೆ ನಾಯಕ ಟಿ ಟಿ ವಿ ದಿನಕರನ್ ಅವರು ಪೆರಿಯಾರ್ ಅವರ ಪ್ರತಿಮೆ ವಿರೂಪಗೊಳಿಸಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT