ಇತರರಿಗೆ ಸ್ಫೂರ್ತಿ ಹೈಸ್ಕೂಲು ಮೆಟ್ಟಿಲು ಹತ್ತಿದ
ಎಷ್ಟೋ ಜನರು ತುತ್ತೂಟಕ್ಕೆ ಕೂಲಿಗೆ ಹೋಗುವ ಅನಿವಾರ್ಯಕ್ಕೆ ಒಳಗಾಗಿ ಈ ಹಳ್ಳಿಯಲ್ಲಿ ಓದನ್ನು ಮುಂದುವರಿಸಲು ಆಗಲೇ ಇಲ್ಲ. ಬಹುತೇಕ ವಿದ್ಯಾರ್ಥಿಗಳಿಗೆ ಕೂಲಿ ಕೆಲಸವನ್ನೂ ಮಾಡಿಕೊಂಡು ಪರೀಕ್ಷೆಯಲ್ಲಿ ಪಾಸಾಗುವುದು ಸವಾಲೇ ಆಗಿತ್ತು. ಹೀಗಾಗಿ ರಾಮಕೇವಲ್‌ನ ಸಾಧನೆಯು ಗ್ರಾಮದ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿದೆ ಎಂದು ಗ್ರಾಮಸ್ಥರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. 10ನೇ ತರಗತಿ ಪರೀಕ್ಷೆ ಬರೆದಿದ್ದರೂ ಫೇಲಾಗಿರುವ ಲವಕೇಶ್ ಮುಕೇಶ್ ಎಂಬಿಬ್ಬರು ಈ ಹುಡುಗನ ಸಾಧನೆಯಿಂದ ಪ್ರೇರಣೆ ಪಡೆದು ಮತ್ತೆ ಪರೀಕ್ಷೆ ಕಟ್ಟಲು ನಿರ್ಧರಿಸಿದ್ದಾರೆ.