ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18ರ ಯುವಕನ ಕೈಚಳಕ: ಮಿನಿ ರೋಲ್ಸ್ ರಾಯ್ಸ್‌ ಆದ ಮಾರುತಿ 800

Published 3 ಅಕ್ಟೋಬರ್ 2023, 6:11 IST
Last Updated 3 ಅಕ್ಟೋಬರ್ 2023, 6:33 IST
ಅಕ್ಷರ ಗಾತ್ರ

ಕೇರಳ: ಕೇರಳದ 18 ವರ್ಷದ ಯುವಕ ಮನೆಯಲ್ಲಿದ್ದ ಮಾರುತಿ 800 ಕಾರನ್ನು ₹45,000 ಖರ್ಚಿನಲ್ಲಿ ಮಿನಿ ರೋಲ್ಸ್ ರಾಯ್ಸ್ (Rolls Royce) ಕಾರ್‌ನಂತೆ ಮರುವಿನ್ಯಾಸಗೊಳಿಸಿದ್ದಾರೆ. 

ಆಟೋ ಮೊಬೈಲ್‌ನಲ್ಲಿ ಹೆಚ್ಚು ಒಲವು ಹೊಂದಿರುವ ಕೇರಳ ಮೂಲದ ಹದೀಫ್ ಎನ್ನುವ ಇವರು ಕಾರನ್ನು ಮಾರ್ಪಾಡು ಮಾಡಿ ಗಮನ ಸೆಳೆದಿದ್ದಾರೆ.

ಟ್ರಿಕ್ಸ್ ಟ್ಯೂಬ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕಾರಿನ ಬಗೆಗಿನ ವಿಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಹದೀಪ್‌, ‘ಕಾರುಗಳ ಬಗ್ಗೆ ಹೆಚ್ಚು ಒಲವು ಹೊಂದಿದ್ದೇನೆ, ಐಷಾರಾಮಿ ಕಾರುಗಳ ಪ್ರತಿಕೃತಿಗಳನ್ನು ಮಾಡಲು ಇಷ್ಟಪಡುತ್ತೇನೆ’ ಎಂದು ಹೇಳಿದ್ದಾರೆ. ಈಗ ವಿನ್ಯಾಸಗೊಳಿಸಿರುವ ಕಾರಿಗೆ ರೋಲ್ಸ್ ರಾಯ್ಸ್‌ನಂತೆ ಕಾಣುವ ಲೋಗೋವನ್ನು ಸ್ವತಃ ತಾವೇ ರಚಿಸಿರುವುದಾಗಿ ಹೇಳಿದ್ದಾರೆ.

ಯೂಟ್ಯೂಬ್‌ನಲ್ಲಿ ಹಂಚಿಕೊಂಡ ವಿಡಿಯೊ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮಾರುತಿ 800 ಕಾರಿನ ಮುಂಭಾಗದಲ್ಲಿ ರೋಲ್ಸ್ ರಾಯ್ಸ್ ನಂತೆ ಕಾಣುವ ಗ್ರಿಲ್ ಮತ್ತು ಹೆಡ್‌ಲೈಟ್‌ಗಳೊಂದಿಗೆ ದಪ್ಪ, ಬೃಹತ್ ವಿನ್ಯಾಸವನ್ನು ಒಳಗೊಂಡಿರುವ ಹೊಸ ಪ್ಯಾನೆಲ್‌ಅನ್ನು ಅಳವಡಿಸಿದ್ದಾರೆ. 

ಕಾರಿನ ಮಾರ್ಪಾಡಿಗೆ ಅವರು ಲೋಹದ ಹಾಳೆಗಳು, ವೆಲ್ಡಿಂಗ್ ಕೆಲಸ ಮತ್ತು ಇತರ ಕಾರುಗಳ ಬಿಡಿಭಾಗಗಳನ್ನು ಬಳಸಿದ್ದಾರೆ.

ಇದು ಹದೀಫ್ ಮರುವಿನ್ಯಾಸಗೊಳಿಸಿದ ಮೊದಲ ವಾಹನವಲ್ಲ. ಈ ಹಿಂದೆ, ಅವರು ಮೋಟಾರ್ ಸೈಕಲ್ ಎಂಜಿನ್ ಬಳಸಿ ಜೀಪ್ ತಯಾರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT