ಹೈದರಾಬಾದ್: ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರಿಗೆ ಭಾರತ ರತ್ನ ನೀಡಬೇಕು ಎನ್ನುವ ನಿರ್ಣಯವನ್ನು ತೆಲಂಗಾಣ ವಿಧಾಸಭೆ ಸೋಮವಾರ ಸರ್ವಾನುಮತದಿಂದ ಅಂಗೀಕರಿಸಿದೆ.
.ಮನಮೋಹನ ಸಿಂಗ್ ಅಸ್ಥಿ ವಿಸರ್ಜನೆ ವೇಳೆ ಗೈರು: ಕಾಂಗ್ರೆಸ್ ಹೇಳಿದ್ದೇನು?.
ಕಲಾಪ ಆರಂಭವಾಗುತ್ತಿದ್ದಂತೆಯೇ, ಡಾ. ಸಿಂಗ್ ಅವರಿಗೆ ಸಂತಾಪ ಸೂಚಿಸುವ ಹಾಗೂ 2014 ರಲ್ಲಿ ತೆಲಂಗಾಣ ರಾಜ್ಯ ರಚನೆಯಲ್ಲಿ ಸಿಂಗ್ ಅವರು ವಹಿಸಿದ ಪಾತ್ರಕ್ಕೆ ಕೃತಜ್ಞತೆ ಅರ್ಪಿಸುವ ನಿಲುವಳಿಯನ್ನು ಮುಖ್ಯಮಂತ್ರಿ ರೇವಂತ ರೆಡ್ಡಿ ಮಂಡಿಸಿದರು.

ಚರ್ಚೆಯ ಬಳಿಕ, ಮನಮೋಹನ ಸಿಂಗ್ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ನಿರ್ಣಯಕ್ಕೆ ಪಕ್ಷಭೇದ ಇಲ್ಲದೆ ಸರ್ವಾನುಮತದ ಅಂಗೀಕಾರ ದೊರಕಿತು.
.ಮನಮೋಹನ ಸಿಂಗ್ ಅವರ ಸ್ಮಾರಕ ವಿಚಾರ; ಕೀಳುಮಟ್ಟದ ರಾಜಕೀಯ: ನಡ್ಡಾ.
ಅಲ್ಲದೆ ಎರಡು ನಿಮಿಷಗಳ ಮೌನಾಚರಣೆಯೂ ನಡೆಯಿತು. ವಿರೋಧ ಪಕ್ಷದ ನಾಯಕ ಕೆ. ಚಂದ್ರಶೇಖರ ರಾವ್ ಸದನಕ್ಕೆ ಗೈರಾಗಿದ್ದರು.
.ಮನಮೋಹನ ಸಿಂಗ್ ಅಗಲಿಕೆಗೆ ಜೋ ಬೈಡನ್ ಸಂತಾಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.