ಹೈದರಾಬಾದ್: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ನಲ್ಲಿ(ಎಚ್ಸಿಎ) ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡವು ಸಂಸ್ಥೆಯ ಕಾರ್ಯದರ್ಶಿ ದೇವರಾಜ್ ರಾಮಚಂದರ್ ಅವರನ್ನು ಬಂಧಿಸಿ ನ್ಯಾಯಾಂಗಕ್ಕೆ ಹಾಜರುಪಡಿಸಿದೆ.

ಈ ಪ್ರಕರಣದಲ್ಲಿ ರಾಮಚಂದರ್ ಅವರನ್ನು ಎ2 ಎಂದು ಹೆಸರಿಸಲಾಗಿದೆ. ಎರಡು ವಾರಗಳಿಂದ ತಲೆಮರೆಸಿಕೊಂಡಿದ್ದ ಅವರನ್ನು ಪುಣೆಯ ತ್ರೀ ಸ್ಟಾರ್ ಹೋಟೆಲ್ನಿಂದ ಬಂಧಿಸಿ ಹೈದರಾಬಾದ್ಗೆ ಕರೆತರಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಇದಕ್ಕೂ ಮೊದಲು, ಸಿಐಡಿ ತಂಡ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಚ್ಸಿಎ ಅಧ್ಯಕ್ಷ ಎ. ಜಗನ್ ಮೋಹನ್ ರಾವ್, ಖಜಾಂಚಿ ಸಿ. ಶ್ರೀನಿವಾಸ್ ರಾವ್, ಸಿಇಒ ಸುನಿಲ್ ಕಾಂಟೆ ಮತ್ತು ಶ್ರೀ ಚಕ್ರ ಕ್ರಿಕೆಟ್ ಕ್ಲಬ್ ಅಧಿಕಾರಿಗಳಾದ ರಾಜೇಂದರ್ ಯಾದವ್ ಮತ್ತು ಅವರ ಪತ್ನಿ ಜಿ. ಕವಿತಾ ಸೇರಿದಂತೆ ಐವರನ್ನು ಬಂಧಿಸಿತ್ತು.

ತೆಲಂಗಾಣ ಕ್ರಿಕೆಟ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ಧರಂ ಗುರುವ ರೆಡ್ಡಿ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಮೂವರಿಗೆ ಜಾಮೀನು ಮಂಜೂರು:

ಈ ಪ್ರಕರಣದ ಮೂವರು ಆರೋಪಿಗಳಿಗೆ ಮಲ್ಕಾಜ್ಗಿರಿ ನ್ಯಾಯಾಲಯ ಈಗಾಗಲೇ ಜಾಮೀನು ನೀಡಿದೆ. ಆರೋಪಿಗಳಾದ ಖಜಾಂಚಿ ಶ್ರೀನಿವಾಸ್, ಕಾರ್ಯದರ್ಶಿ ರಾಜೇಂದ್ರ ಯಾದವ್ ಮತ್ತು ಶ್ರೀಚಕ್ರ ಕ್ರಿಕೆಟ್ ಕ್ಲಬ್ ಅಧ್ಯಕ್ಷೆ ಕವಿತಾ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.

ಮತ್ತೊಂದೆಡೆ, ಜಗನ್ ಮೋಹನ್ ರಾವ್ ಅವರನ್ನು ಕಸ್ಟಡಿಗೆ ನೀಡುವಂತೆ ಕೋರಿ ಸಿಐಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು. ಜಗನ್ಮೋಹನ್ ಮತ್ತು ಸುನಿಲ್ ಅವರ ಅರ್ಜಿ ವಿಚಾರಣೆಯನ್ನು ಸೋಮವಾರ ನಡೆಸುವುದಾಗಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.