ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೆ ಯಾವ ಖಾತೆ? ಇಲ್ಲಿದೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸಂಪುಟದ ವಿವರ

Published 9 ಡಿಸೆಂಬರ್ 2023, 7:46 IST
Last Updated 9 ಡಿಸೆಂಬರ್ 2023, 7:46 IST
ಅಕ್ಷರ ಗಾತ್ರ

ಹೈದರಾಬಾದ್: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರನ್ನು ಭೇಟಿಯಾಗಿ ನೂತನ ಸಚಿವರ ಖಾತೆ ಪಟ್ಟಿಯನ್ನು ಸಲ್ಲಿಸಿದ್ದಾರೆ.

ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ನೌಕೆಯನ್ನು ಅಧಿಕಾರದ ದಡದತ್ತ ನಡೆಸಿದ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎ. ರೇವಂತ್‌ ರೆಡ್ಡಿ ಅವರು ಬೆಂಬಲಿಗರ ಹರ್ಷೋದ್ಗಾರದ ನಡುವೆ ರಾಜ್ಯದ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದರು.

ಇದೇ ವೇಳೆ, ರೇವಂತ್‌ ಸಂಪುಟದ 11 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಯಾರಿಗೆ ಯಾವ ಖಾತೆ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.

ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಪೌರಾಡಳಿತ ಮತ್ತು ನಗರಾಭಿವೃದ್ಧಿ, ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಇತರೆ ಹಂಚಿಕೆಯಾಗದ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

ರಾಜ್ಯದ ಮೊದಲ ದಲಿತ ಉಪ ಮುಖ್ಯಮಂತ್ರಿಯಾಗಿರುವ ಮಲ್ಲು ಭಟ್ಟಿ ವಿಕ್ರಮಾರ್ಕ ಅವರಿಗೆ ಹಣಕಾಸು ಮತ್ತು ಇಂಧನ ಖಾತೆ ಹಂಚಿಕೆ ಮಾಡಲಾಗಿದೆ.

ಎನ್‌. ಉತ್ತಮ್ ಕುಮಾರ್ ರೆಡ್ಡಿ –ನೀರಾವರಿ, ಆಹಾರ ಮತ್ತು ನಾಗರಿಕ ಸರಬರಾಜು

ತುಮ್ಮಲ ನಾಗೇಶ್ವರ ರಾವ್‌ –ಕೃಷಿ ಮತ್ತು ಸಹಕಾರ ಹಾಗೂ ಜವಳಿ ಖಾತೆ

ಪೊನ್ನಂ ಪ್ರಭಾಕರ್ –ಸಾರಿಗೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ

ಜುಪಲ್ಲಿ ಕೃಷ್ಣ ರಾವ್‌ –ಅಬಕಾರಿ ಮತ್ತು ಪ್ರವಾಸೋದ್ಯಮ ಇಲಾಖೆ

ದಾಮೋದರ್‌ ರಾಜಾನರಸಿಂಹ –ಆರೋಗ್ಯ, ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ

ಕೋಮತಿರೆಡ್ಡಿ ವೆಂಕಟ್‌ ರೆಡ್ಡಿ –ವಿಜ್ಞಾನ ಮತ್ತು ತಂತ್ರಜ್ಞಾನ

ಡಿ. ಶ್ರೀಧರ್‌ ಬಾಬು –ಮಾಹಿತಿ ತಂತ್ರಜ್ಞಾನ

ಪಂಗುಲೇಟಿ ಶ್ರೀನಿವಾಸ್‌ ರೆಡ್ಡಿ – ಕಂದಾಯ ಮತ್ತು ವಸತಿ

ಕೊಂಡ ಸುರೇಖಾ –ಪರಿಸರ ಮತ್ತು ಅರಣ್ಯ ಇಲಾಖೆ

ಡಿ. ಅನುಸೂಯ (ಸೀತಕ್ಕ) –ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT